BIG NEWS: ಸಚಿವ ಸ್ಥಾನಕ್ಕಾಗಿ ತೀವ್ರಗೊಂಡ ಲಾಬಿ; ನನಗೂ ಮಂತ್ರಿ ಸ್ಥಾನ ಬೇಕು, ಶಿವಮೊಗ್ಗ ಉಸ್ತುವಾರಿಗಾಗಿಯೂ ಬೇಡಿಕೆ ಇಟ್ಟ ಶಾಸಕ ಬಿ.ಕೆ. ಸಂಗಮೇಶ್

ಬೆಂಗಳೂರು: ನೂತನ ಸರ್ಕಾರ ರಚನೆ ಬೆನ್ನಲ್ಲೇ ಸಚಿವ ಸ್ಥಾನಕ್ಕಾಗಿ ಲಾಬಿ ತೀವ್ರಗೊಂಡಿದೆ. ನಾನು ನಾಲ್ಕು ಬಾರಿ ಶಾಸಕನಾದವನು ನನಗೂ ಸಚಿವ ಸ್ಥಾನ ನೀಡಬೇಕು ಎಂದು ಭದ್ರಾವತಿ ಶಾಸಕ ಬಿ.ಕೆ. ಸಂಗಮೆಶ್ ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಗಮೇಶ್, ಬಿಜೆಪಿಯಿಂದ ಸಚಿವ ಸ್ಥಾನ ನೀಡುವುದಾಗಿ ಹೇಳಿ ಕೋಟಿ ಕೋಟಿ ಆಫರ್ ಬಂದಿತ್ತು. ಆದರೆ ಪಕ್ಷ ನಿಷ್ಠೆಯಿಂದ ನಾನು ಹೋಗಿಲ್ಲ. ನನಗೆ ಸಚಿವ ಸ್ಥಾನದ ಜೊತೆಗೆ ಶಿವಮೊಗ್ಗ ಉಸ್ತುವಾರಿ ಕೊಡಬೇಕು ಎಂದು ಹೇಳಿದ್ದಾರೆ.

ಮಧು ಬಂಗಾರಪ್ಪ ಸಚಿವ ಸ್ಥಾನ ಕೇಳಲಿ, ನಾನು ಬೇಡ ಅನ್ನಲ್ಲ, ಆದರೆ ಶಿವಮೊಗ್ಗ ಜಿಲ್ಲೆಯಲ್ಲಿ ನಾನೇ ಹಿರಿಯ ನಾಯಕನಾಗಿದ್ದೇನೆ. ನನ್ನ ಹಿರಿತನ ಪರಿಗಣಿಸಿ ಸಚಿವ ಸ್ಥಾನ ಕೊಡುವ ವಿಶ್ವಾಸವಿದೆ ಎಂದರು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read