BIG NEWS: ಸಚಿವ ಭೈರತಿ ಬಸವರಾಜ್ ವಿರುದ್ಧ ಮತ್ತೊಂದು ಅಕ್ರಮದ ಆರೋಪ; ಹೊಸ ಬಾಂಬ್ ಸಿಡಿಸಿದ KSDL ನೌಕರರ ಸಂಘ

Land-grab case against Karnataka minister rocks Houses | Deccan Heraldಬೆಂಗಳೂರು: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬೆನ್ನಲ್ಲೇ ಇದೀಗ ಸಚಿವ ಭೈರತಿ ಬಸವರಾಜ್ ವಿರುದ್ಧವೂ ಕೆ ಎಸ್ ಡಿ ಎಲ್ ನೌಕರರ ಸಂಘ ಗಂಭೀರ ಆರೋಪ ಮಾಡಿದೆ.

ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಕೆ ಎಸ್ ಡಿ ಎಲ್ ಅಧ್ಯಕ್ಷರಾಗಿದ್ದಾಗ 800 ಕೋಟಿ ಅಕ್ರಮ ನಡೆಸಿದ್ದಾರೆ ಎಂಬ ಬಗ್ಗೆ ಆರೋಪ ಮಾಡಿರುವ ಕೆ ಎಸ್ ಡಿ ಎಲ್ ನೌಕರರ ಸಂಘ ಹಿಂದಿನ ಅಧ್ಯಕ್ಷರಾಗಿದ್ದ ಭೈರತಿ ಬಸವರಾಜ್ ಅವರೂ ಕೂಡ 3 ಕೋಟಿಗೂ ಅಧಿಕ ಅಕ್ರಮ ನಡೆಸಿದ್ದಾರೆ ಎಂದು ಆರೋಪಿಸಿದೆ.

ಭೈರತಿ ಬಸವರಾಜ್ ಅವರು ಸಿ ಎಸ್ ಆರ್ ಫಂಡ್ ದುರುಪಯೋಗಪಡಿಸಿಕೊಂಡಿದ್ದಾರೆ. ಯಾವುದೇ ಕಂಪನಿ ಶೇ.2ರಷ್ಟು ಸಿ ಎಸ್ ಆರ್ ಫಂಡ್ ಇಡಬೇಕು. ಆದರೆ ಭೈರತಿ ಬಸವರಾಜ್ ಅವರು ಈ ಫಂಡ್ ನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಸುಮಾರು 3.75 ಕೋಟಿ ರೂಪಾಯಿ ಹಣವನ್ನು ಸ್ಕೂಲ್ ಗಾಗಿ ಸಚಿವ ಭೈರತಿ ಬಸವರಾಜ್ ತೆಗೆದುಕೊಂಡು ಹೋಗಿದ್ದಾರೆ. ಆ ಹಣ ಏನಾಯಿತು ಎಂಬುದೇ ಗೊತ್ತಿಲ್ಲ. ಈ ಬಗ್ಗೆಯೂ ಸೂಕ್ತ ತನಿಖೆಯಾಗಬೇಕು ಎಂದು ಕೆ ಎಸ್ ಡಿ ಎಲ್ ನೌಕರರ ಸಂಘ ಒತ್ತಾಯಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read