BIG NEWS: ಶಿಕಾರಿಪುರದ ಬೆನ್ನಲ್ಲೇ ಬಾಗಲಕೋಟೆಗೂ ಹಬ್ಬಿದ ಬಂಜಾರ ಸಮುದಾಯದ ಪ್ರತಿಭಟನೆ

ಬಾಗಲಕೋಟೆ: ಒಳ ಮೀಸಲಾತಿಗೆ ವಿರೋಧಿಸಿ ಬಂಜಾರ ಸಮುದಾಯದ ಪ್ರತಿಭಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಈ ಮಧ್ಯೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿಯೂ ಪ್ರತಿಭಟನೆ ಆರಂಭವಾಗಿದೆ.

ಬಾಗಲಕೋಟೆಯ ವಿವಿಧ ತಾಂಡಾಗಳಲ್ಲಿ ಪ್ರತಿಭಟನೆ ಆರಂಭವಾಗಿದ್ದು, ಬಿಜೆಪಿ ಬಾವುಟಗಳನ್ನು ಕಿತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಮುಚಖಂಡಿ, ಹುನಗುಂದ ತಾಲೂಕಿನ ಅಮೀನಗಡ, ಕಮತಗಿ ತಾಂಡಾ, ಆಚನೂರು, ನೀಲಾನಗರ ತಾಂಡಾಗಳಲ್ಲಿ ಪ್ರತಿಭಟನೆಯ ಕಿಚ್ಚು ಹೊತ್ತಿಕೊಂಡಿದ್ದು, ಮನೆ, ವಿದ್ಯುತ್ ಕಂಬ, ರಸ್ತೆಗಳಲ್ಲಿ ಅಳವಡಿಸಲಾಗಿದ್ದ ಬಿಜೆಪಿ ಬಾವುಟ, ಬ್ಯಾನರ್ ಗಳನ್ನು ಕಿತ್ತು ಸರ್ಕಾರದ ವಿರುದ್ಧ ಬಂಜಾರ ಸಮುದಾಯದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read