BIG NEWS: ವಿದ್ಯಾರ್ಥಿನಿಯರಿಗೆ ಶೇ.2‌ ರಷ್ಟು ಮುಟ್ಟಿನ ರಜೆ; ಕೇರಳ ವಿವಿಯಿಂದ ಮಹತ್ವದ ಕ್ರಮ

ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯ ವಿದ್ಯಾರ್ಥಿನಿಯರಿಗೆ ವಿಶೇಷವಾದ 2 ಪ್ರತಿಶತದಷ್ಟು ಮುಟ್ಟಿನ  ರಜೆ ಪಡೆಯಲು ಅವಕಾಶ ಕಲ್ಪಿಸಿದೆ. ಕೇರಳ ವಿಶ್ವವಿದ್ಯಾನಿಲಯ ಹಾಜರಾತಿ ಕೊರತೆಯ ಹೆಚ್ಚುವರಿ ಕ್ಷಮಾದಾನದ ರೂಪದಲ್ಲಿ “ಮುಟ್ಟಿನ ಪ್ರಯೋಜನ” ವನ್ನು ತೆಗೆದುಕೊಳ್ಳಲು ಅವಕಾಶ ನೀಡುತ್ತಿದೆ.

ವಿಶ್ವವಿದ್ಯಾನಿಲಯದ ಪ್ರಕಾರ ಪ್ರತಿ ಸೆಮಿಸ್ಟರ್‌ನಲ್ಲಿ ರಜೆಯನ್ನು ಪಡೆಯಬಹುದು. ಮುಟ್ಟಿನ ರಜೆ ನೀಡಲೇಬೇಕೆಂಬುದು ವಿದ್ಯಾರ್ಥಿನಿಯರ ಬಹುಕಾಲದ ಬೇಡಿಕೆಯಾಗಿತ್ತು.

ಸ್ವಾಯತ್ತ ವಿಶ್ವವಿದ್ಯಾನಿಲಯವಾದ CUSAT ವಿವಿಧ ಸ್ಟ್ರೀಮ್‌ಗಳಲ್ಲಿ 8000 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದೆ.  ಅವರಲ್ಲಿ ಅರ್ಧಕ್ಕಿಂತ ಹೆಚ್ಚು ವಿದ್ಯಾರ್ಥಿನಿಯರಿದ್ದಾರೆ. CUSAT ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಹಾಜರಾಗಲು ಪ್ರತಿ ಸೆಮಿಸ್ಟರ್‌ನಲ್ಲಿ 75 ಪ್ರತಿಶತ ಹಾಜರಾತಿ ಅಗತ್ಯವಿದೆ. ಆದರೆ ಹೊಸ ಆದೇಶದ ಮೂಲಕ ವಿದ್ಯಾರ್ಥಿನಿಯರಿಗೆ ಇದರಲ್ಲಿ ಶೇ.2 ರಷ್ಟು ವಿನಾಯಿತಿ ನೀಡಲಾಗುತ್ತಿದೆ. ವಿದ್ಯಾರ್ಥಿನಿಯರಿಗೆ ಪ್ರತಿ ಸೆಮಿಸ್ಟರ್‌ನಲ್ಲಿ ಅರ್ಹ ಹಾಜರಾತಿಯನ್ನು ಶೇ.73 ಕ್ಕೆ ಇಳಿಸಲಾಗುತ್ತದೆ.

ವಿದ್ಯಾರ್ಥಿನಿಯರ ಹಾಜರಾತಿಯ ಮೇಲೆ ಅವಲಂಬಿತವಾಗಿರುವುದರಿಂದ ಪ್ರತಿಯೊಬ್ಬರಿಗೂ ಇದು ವಿಭಿನ್ನವಾಗಿರುತ್ತದೆ. ಪ್ರತಿ ವಿದ್ಯಾರ್ಥಿನಿಯು ತಮ್ಮ ಒಟ್ಟು ಹಾಜರಾತಿಯಲ್ಲಿ ಶೇ.2 ರಷ್ಟನ್ನು ಮುಟ್ಟಿನ ಪ್ರಯೋಜನವಾಗಿ ಪಡೆಯಬಹುದು. ಅದಕ್ಕಾಗಿಯೇ ಆದೇಶದಲ್ಲಿ ನಿಖರವಾದ ರಜೆಯ ಸಂಖ್ಯೆಯನ್ನು ನಮೂದಿಸಲಾಗಿಲ್ಲ. ಈ ಆದೇಶವು ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿರುವವರು ಸೇರಿದಂತೆ ಎಲ್ಲಾ ಸ್ಟ್ರೀಮ್‌ಗಳ ವಿದ್ಯಾರ್ಥಿನಿಯರಿಗೆ ಅನ್ವಯಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read