BIG NEWS: ರಾಷ್ಟ್ರೀಯ ಯುವಜನೋತ್ಸವ; ಹುಬ್ಬಳ್ಳಿಗೆ ಪ್ರಧಾನಿ ಮೋದಿ ಎಂಟ್ರಿ; ಏರ್ ಪೋರ್ಟ್ ನಿಂದ ರೈಲ್ವೆ ಮೈದಾನದವರೆಗೆ ರೋಡ್ ಶೋ; ಹೂಮಳೆಗರೆದು ಪ್ರಧಾನಿ ಸ್ವಾಗತಿಸಿದ ಯುವಜನತೆ

ಹುಬ್ಬಳ್ಳಿ: 26ನೇ ರಾಷ್ಟ್ರೀಯ ಯುವಜನೋತ್ಸವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹುಬ್ಬಳ್ಳಿಗೆ ಆಗಮಿಸಿದ್ದಾರೆ.

ದೆಹಲಿಯಿಂದ ಭಾರತೀಯ ವಾಯುಸೇನೆ ವಿಶೇಷ ವಿಮಾನದಲ್ಲಿ ಹುಬ್ಬಳ್ಳಿ ಏರ್ ಪೋರ್ಟ್ ಗೆ ಬಂದಿಳಿದ ಪ್ರಧಾನಿ ಮೋದಿಯವರನ್ನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಕೇದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಬಿಜೆಪಿ ಮುಖಂಡರು ಆತ್ಮೀಯವಾಗಿ ಬರಮಾಡಿಕೊಂಡರು. ಏರ್ ಪೋರ್ಟ್ ನಿಂದ ರೈಲ್ವೆ ಮೈದಾನದವರೆಗೆ 15 ನಿಮಿಷಗಳ ಕಾಲ ಪ್ರಧಾನಿ ಮೋದಿ ರೋಡ್ ಶೋ ನಡೆಸಿದರು.

ಏರ್ ಪೋರ್ಟ್ ನಿಂದ ಹುಬ್ಬಳ್ಳಿ ರೈಲ್ವೆ ನಿಲ್ದಾಣದತ್ತ ಕಾರಿನಲ್ಲಿ ತೆರಳುತ್ತಿದ್ದ ಪ್ರಧಾನಿ ಮೋದಿ ಮಾರ್ಗ ಮಧ್ಯೆಯೇ ಕಾರಿನಿಂದ ಇಳಿದು, ರಸ್ತೆಯುದ್ದಕ್ಕೂ ನಿಂತಿದ್ದ ಜನರತ್ತ ಕೈಬೀಸಿ ಸಾಗಿದರು. ಮೋದಿ ಮೋದಿ ಎಂಬ ಹರ್ಷೋದ್ಘಾರ, ಜಯಘೋಷ ಮುಗಿಲು ಮುಟ್ಟಿತ್ತು. ಬಳಿಕ ಯುವಜನೋತ್ಸವ ಉದ್ಘಾಟನಾ ಸಮಾರಂಭ ನಡೆಯುವ ರೈಲ್ವೆ ಮೈದಾನದತ್ತ ಸಾಗಿದ ಪ್ರಧಾನಿ ಮೋದಿ ಅವರ ಕಾರಿನ ಮೇಲೆ ರಸ್ತೆಯುದ್ದಕ್ಕೂ ಹೂಮಳೆಗರೆಯಲಾಯಿತು.

ಇಂದಿನಿಂದ 6 ದಿನಗಳ ಕಾಲ ನಡೆಯಲಿರುವ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ರಾಷ್ಟ್ರೀಯ ಯುವಜನೋತ್ಸವಕ್ಕೆ ಹುಬ್ಬಳ್ಳಿ ರೈಲ್ವೆ ಮೈದಾನದಲ್ಲಿ ಲಕ್ಷಾಂತರ ಜನರು ಕಿಕ್ಕಿರಿದು ನೆರೆದಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read