BIG NEWS : ರಾಜ್ಯದಲ್ಲಿ ಸಕಾಲ ಅರ್ಜಿಗಳು ವಿಳಂಬವಾದ ಪ್ರಕರಣ : ಸರ್ಕಾರದಿಂದ ಮಹತ್ವದ ಆದೇಶ

ಬೆಂಗಳೂರು : ಸಕಾಲ ಅರ್ಜಿಗಳು ವಿಳಂಬವಾದ ಪ್ರಕರಣಗಳಲ್ಲಿ ಸಕಾಲ ಮಿಷನ್ ನಿಂದ ವಿನಾಯಿತಿ ನೀಡಲು ಬರುವುದಿಲ್ಲ ಎಂದು ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಮೇಲಿನ ವಿಷಯಕ್ಕೆ ಸಂಬಂಧಪಟ್ಟಂತೆ. ಸಕಾಲ ಅರ್ಜಿಗಳು ತಾಂತ್ರಿಕ ಇತ್ಯಾದಿ ಕಾರಣಗಳಿಂದ ಗಮನಾರ್ಹ ಸಂಖ್ಯೆಯಲ್ಲಿ ವಿಳಂಬವಾದ ಸಂದರ್ಭದಲ್ಲಿ ಆಡಳಿತ ಇಲಾಖೆಗಳು ವಿಳಂಬಕ್ಕೆ ಕಾರಣಗಳನ್ನು ವಿವರಿಸಿ ಸದರಿ ಅರ್ಜಿಗಳು ಸಕಾಲ ಅವಧಿಮೀರಿ ವಿಳಂಬವಾಗಿರುವುದಕ್ಕೆ ಸಕಾಲ ಮಿಷನ್ವತಿಯಿಂದ ವಿನಾಯಿತಿ ನೀಡಲು ಕೋರಿ ಆಡಳಿತ ಇಲಾಖೆಗಳಿಂದ ಸಕಾಲ ಮಿಷನ್ ಕಛೇರಿಯಲ್ಲಿ ಹಲವಾರು ಪತ್ರಗಳು ಸ್ವೀಕೃತವಾಗುತ್ತಿರುವುದು ಸರಿಯಷ್ಟೆ.

ಆದರೆ ಸಕಾಲ ಕಾಯ್ದೆಯ ನಿಬಂಧನೆಗಳ ಪ್ರಕಾರ/ಅನುಸಾರ, ಸಕಾಲ ಮಿಷನ್ಗೆ ಸಕಾಲ ಕಾಯ್ದೆಯಡಿ ಈ ರೀತಿ ವಿನಾಯಿತಿ ನೀಡಲು ಯಾವುದೇ ಕಾನೂನಾತ್ಮಕ ಅಧಿಕಾರವನ್ನು ನೀಡಿರುವುದಿಲ್ಲ. ಬದಲಾಗಿ ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ, 2011 ಮತ್ತು (ತಿದ್ದುಪಡಿ) ಅಧಿನಿಯಮ, 2014 ರ ಕಲಂ 10 ಹಾಗೂ 11 ರನ್ವಯ ಮೊದಲನೇ ಮೇಲ್ಮನವಿಯನ್ನು ಇತ್ಯರ್ಥ ಪಡಿಸುವ ಅಧಿಕಾರವನ್ನು ಆಯಾ ಆಡಳಿತ ಇಲಾಖೆಗಳ ಸಂಬಂಧಪಟ್ಟ ಸಕ್ರಮ ಅಧಿಕಾರಿಗೆ ನೀಡಲಾಗಿದೆ.

ಮುಂದುವರೆದು, ಕಲಂ 13(4) ರಡಿಯಲ್ಲಿ ಸಕಾಲ ಕಾಯ್ದೆಯಡಿ ಎರಡನೇ ಮೇಲ್ಮನವಿಗಳನ್ನು ಇತ್ಯರ್ಥಪಡಿಸುವ ಅಧಿಕಾರವನ್ನು ಆಯಾ ಆಡಳಿತ ಇಲಾಖೆಗಳ ಸಂಬಂಧಪಟ್ಟ ಮೇಲ್ಮನವಿ ಪ್ರಾಧಿಕಾರಕ್ಕೆ, ನೀಡಲಾಗಿದೆ.
ಸಕಾಲ ಕಾಯ್ದೆಯಡಿ ಬಾಧಿತ ಅರ್ಜಿದಾರರು ಮೇಲ್ಮನವಿಯನ್ನು ಸಲ್ಲಿಸಿದಾಗ, ಸಕ್ಷಮ ಅಧಿಕಾರಿಯು ಕಲಂ 11(3) ರಡಿ ನಿರ್ದೇಶಿಸಿದಂತೆ ಸಕಾಲ ಅಧಿನಿಯಮದ ಅಡಿಯಲ್ಲಿ ಹೊಣೆಗಾರಿಕೆಯನ್ನು ನಿಗದಿಪಡಿಸುವಾಗ ಮೇಲ್ಮನವಿವಾರು ಪ್ರತ್ಯೇಕವಾಗಿ ಸಂಬಂಧಪಟ್ಟ ಆದೇಶವನ್ನು ಹೊರಡಿಸುವುದಕ್ಕೆ ಮೊದಲು. ಸ್ವಾಭಾವಿಕ ನ್ಯಾಯ ತತ್ವಗಳನ್ನು ಅನುಸರಿಸಿ, ಅರೆನ್ಯಾಯಿಕ ಪ್ರಾಧಿಕಾರವಾಗಿ ಎರಡೂ ಕಡೆ ಅಹವಾಲುಗಳನ್ನು ಆಲಿಸಿ ದಾಖಲಾತಿ ಇತ್ಯಾದಿ ಸಾಕ್ಷಾಧಾರ (Evidence) ಗಳನ್ನು ಪರಿಶೀಲಿಸಿ ಅವರ ವಿವೇಚನಾ ಅಧಿಕಾರವನ್ನು ಉಪಯೋಗಿಸಿ ಮೇಲ್ಮನವಿ ಆದೇಶವನ್ನು ಹೊರಡಿಸಬೇಕಾಗಿರುತ್ತದೆ.

ಆದ್ದರಿಂದ ಸಕಾಲ ಕಾಯ್ದೆಯಡಿ ಸಕಾಲ ಮಿಷನ್ಗೆ ಯಾವುದೇ ಅಪೀಲು ಪ್ರಾಧಿಕಾರದ ಅಧಿಕಾರವನ್ನು ನೀಡದೇ ಇರುವುದರಿಂದ ಸಕಾಲ ಅನುಸೂಚಿಯಲ್ಲಿ ನಿಗದಿಪಡಿಸಲಾದ ನಿಗದಿತ ಅವಧಿ ಮೀರಿ ಯಾವುದೇ ಅರ್ಜಿ ವಿಳಂಬವಾದಲ್ಲಿ ಸಕಾಲ ಮಿಷನ್ ನಿಂದ ವಿನಾಯಿತಿ ನೀಡುವ ಪ್ರಶ್ನೆ ಉದ್ಭವವಾಗುವುದಿಲ್ಲ.
ಇದರಂತೆ ಆಡಳಿತ ಇಲಾಖೆಗಳು ಭವಿಷ್ಯದಲ್ಲಿ ಸಕಾಲ ಅರ್ಜಿಗಳ ಅವಧಿಮೀರಿ ಬಾಕಿ ಪ್ರಕರಣಗಳಲ್ಲಿ ವಿನಾಯಿತಿ ಕೋರಿ ಸಕಾಲ ಮಿಷನ್ಗೆ ಯಾವುದೇ ಪತ್ರ ವ್ಯವಹರಣೆಗಳನ್ನು ನಡೆಸಬಾರದೆಂದು ಈ ಮೂಲಕ ತಿಳಿಸಿದೆ.


Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read