BIG NEWS: ರಾಜಸ್ಥಾನಿ ಪೇಟ ತೊಟ್ಟು ವಿಧಾನಸೌಧಕ್ಕೆ ಆಗಮಿಸಿದ ಡಿಸಿಎಂ; ನುಡಿದಂತೆ ನಡೆಯುವುದೇ ಕಾಂಗ್ರೆಸ್ ಶಕ್ತಿ ಎಂದ ಡಿ.ಕೆ.ಶಿವಕುಮಾರ್

Thumbnail image

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆ ಮಹಿಳೆಯರ ಉಚಿತ ಬಸ್ ಪ್ರಯಾಣ ಕಾರ್ಯಕ್ರಮಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ರಾಜಸ್ಥಾನಿ ಪೇಟ ಧರಿಸಿ ಆಗಮಿಸಿದ್ದು ವಿಶೇಷವಾಗಿದ್ದು, ನಾವು ಜನರಲ್ಲಿಯೇ ಈಶ್ವರನನ್ನು ಕಾಣುತ್ತೇವೆ ಎಂದು ಹೇಳಿದ್ದಾರೆ.

ಉಜ್ಜನಿಯ ಮಹಾಕಾಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬೆಂಗಳೂರಿಗೆ ಆಗಮಿಸಿದ ಡಿ.ಕೆ.ಶಿವಕುಮಾರ್, ರಾಜಸ್ಥಾನಿ ಪೇಟ ತೊಟ್ಟು ವಿಧಾನಸೌಧಕ್ಕೆ ಆಗಮಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ನಾವು ಬಸವಣ್ಣನ ನಾಡಲ್ಲಿದ್ದೇವೆ. ನುಡಿದಂತೆ ನಡೆಯುವುದು ಕಾಂಗ್ರೆಸ್ ಶಕ್ತಿ ಎಂದರು.

ಬಿಜೆಪಿಯವರು ಟೀಕಿಸಲಿ, ಟೀಕೆಗಳು ಸಾಯುತ್ತವೆ ಹೆಚ್ಚುಕಾಲ ಟೀಕೆಗಳು ಬಾಳಲ್ಲ, ಬಿಜೆಪಿಯವರ ಟೀಕೆಯಿಂದ ಏನೂ ಆಗುವುದಿಲ್ಲ. ಟೀಕಿಸುವವರು ಟೀಕಿಸಲಿ, ಮಾತನಾಡುವವರು ಮಾತನಾಡಲಿ ನಾವು ಮಾಡುವ ಜನಪರ ಕೆಲಸ ಮಾಡುತ್ತೇವೆ. ನಾಲ್ಕು ದಿನ ಟೀಕಿಸಬಹುದು. ಆದರೆ ನಾವು ಕೊಟ್ಟ ಭರವಸೆಯನ್ನು ಶಸ್ವಿಯಾಗಿ ಈಡೇರಿಸಿದ್ದೇವೆ. ಬಿಜೆಪಿಯವರು ಎಷ್ಟರ ಮಟ್ಟಿಗೆ ಭರವಸೆ ಈಡೇರಿಸಿದರು? ಎಂದು ಪ್ರಶ್ನಿಸಿದರು.

ಇಂದು ಪವಿತ್ರವಾದ ದಿನ. ಉಜ್ಜಯಿನಿ ಮಹಾಕಾಲೇಶ್ವರ ದೇವಾಲಯಕ್ಕೆ ಹೋಗಿ ಬಂದಿದ್ದೇನೆ. ಜನರನ್ನು ಸಂತೋಷಪಡಿಸುವುದೇ ನಿಜವಾದ ಈಶ್ವರನ ಪೂಜೆ. ಆ ಈಶ್ವರನ ಪೂಜೆ ಮಾಡಿಕೊಂಡು ಬಂದಿದ್ದೇನೆ. ಜನರಲ್ಲಿ ಈಶ್ವರನನ್ನು ಕಾಣುತ್ತಿದ್ದೇನೆ ಎಂದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read