ಬೆಂಗಳೂರು: ಹಾಸನಾಂಬೆ ದರ್ಶನದ ವೇಳೆ ಜಿಲ್ಲಾಡಳಿತದಿಂದ ಶಿಷ್ಠಾಚಾರ ಪಾಲನೆ ಮಾಡದ ವಿಚಾರವಾಗಿ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ನಾನು ಪ್ರೋಟೋಕಾಲ್ ಗೆ ಆದ್ಯತೆ ನೀಡಲ್ಲ ಎಂದಿದ್ದಾರೆ.
ಕೇಂದ್ರ ಸಚಿವ ಕುಮಾರಸ್ವಾಮಿ ಹಾಸನಾಂಬೆ ದರ್ಶನಕ್ಕೆ ಆಗಮಿಸಿದ್ದ ವೇಳೆ ಜಿಲ್ಲಾಡಳಿತ ಶಿಷ್ಠಾರ ಪಾಲಿಸದೇ ಅಗೌರವ ತೋರಿದೆ, ಅವಮಾನಿಸಿದೆ ಎಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ಹಾಸನಾಂಬೆ ದೇವಾಲಯದ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ನಾನು ಪ್ರೋಟೋಕಾಲ್ ಗೆ ಅಷ್ಟು ಆದ್ಯತೆ ಕೊಡುವುದಿಲ್ಲ. ಸುಮ್ಮನೇ ಅಧಿಕಾರಿಗಳಿಗೆ ಯಾಕೆ ತೊಂದರೆಕೊಡಬೇಕು? ದೇವಿಯ ದರ್ಶನ ಮುಖ್ಯ. ದರ್ಶನವಾಗಿದೆ ಎಂದು ಹೇಳಿದರು.
ಇನ್ನು ರಾಜ್ಯ ರಾಜಕಾರಣದಲ್ಲಿ ನವೆಂಬರ್ ಕ್ರಾಂತಿ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, ಯಾವ ಕ್ರಾಂತಿಯೂ ನಡೆಯಲ್ಲ, ಅಭಿವೃದ್ಧಿ ಕ್ರಾಂತಿ ಮಾಡಲಿ ಎಂದು ಹೇಳಿದರು.