BIG NEWS: ಮನೆಯಲ್ಲಿ ಒಂದು ತಲ್ವಾರ್ ಇಡುವುದು ಅಪರಾಧವಲ್ಲ; ಹಿಂದೂಗಳು ತಲ್ವಾರ್ ಇಡಬೇಕು; ವಿವಾದ ಸೃಷ್ಟಿಸಿದ ಪ್ರಮೋದ್ ಮುತಾಲಿಕ್ ಹೇಳಿಕೆ

ಕಲಬುರ್ಗಿ: ಹಿಂದೂಗಳು ಮನೆಯಲ್ಲಿ ಕಣ್ಣಿಗೆ ಕಾಣುವಂತೆ ತಲ್ವಾರ್ ಇಡಬೇಕು ಎಂದು ಹೇಳುವ ಮೂಲಕ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕಲಬುರ್ಗಿಯ ಯಡ್ರಾಮಿಯಲ್ಲಿ ಮಾತನಾಡಿದ ಮುತಾಲಿಕ್, ಮೊದಲು ನಾವೆಲ್ಲರೂ ಆಯುಧಗಳನ್ನು ಪೂಜೆ ಮಾಡುತ್ತಿದ್ದೆವು. ಈಗ ಪುಸ್ತಕ, ಪೆನ್ನು, ವಾಹನಗಳ ಪೂಜೆ ಮಾಡುತ್ತಿದ್ದೇವೆ. ಇನ್ಮುಂದೆ ತಲ್ವಾರ್, ಕೊಡಲಿ, ಚಾಕು ಇಟ್ಟು ಪೂಜೆ ಮಾಡಬೇಕಿದೆ ಎಂದು ಹೇಳಿದ್ದಾರೆ.

ಪೊಲೀಸರು ಪೊಲೀಸ್ ಠಾಣೆಯಲ್ಲಿ ಬಂದೂಕಿಗೆ ಪೂಜೆ ಮಾಡಲ್ವಾ? ಮನೆಯಲ್ಲಿ ಒಂದು ತಲ್ವಾರ್ ಇಡುವುದು ಅಪರಾಧವಲ್ಲ, ಪೊಲೀಸರು ಬಂದು ಕೇಸ್ ಹಾಕುತ್ತೇವೆ ಎಂದು ಹೆದರಿಸಿದರೆ ಹೇಳಿ, ಶಸ್ತ್ರ ಹಿಡಿದ ಕಾಳಿ, ಹನುಮ, ರಾಮನ ಮೇಲೂ ಕೇಸ್ ಹಾಕಿ ಎಂದು. ತಲ್ವಾರ್ ಇಟ್ಟರೆ ಯಾರೂ ಹೆಣ್ಣುಮಕ್ಕಳ ಮೇಲೆ ಕಣ್ಣು ಹಾಕಲ್ಲ. ತಲ್ವಾರ್ ಇಡುವುದು ಹೊಡೆಯಲು ಅಲ್ಲ, ರಕ್ಷಣೆಗಾಗಿ, ದೇಶ ರಕ್ಷಣೆಗಾಗಿ ಎಂದು ಹೇಳಿದ್ದಾರೆ. ಮುತಾಲಿಕ್ ಹೇಳಿಕೆ ತೀವ್ರ ಚರ್ಚೆಗೆ ಕಾರಣವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read