BIG NEWS: ಮತ್ತೆ ದುಬಾರಿಯಾಯ್ತು ಚಿನ್ನ, ದಾಖಲೆಯ ಮಟ್ಟ ತಲುಪಿದ ಬೆಲೆ…..!

ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇದೀಗ ಬಂಗಾರ ಬಲು ಭಾರವಾಗಿದ್ದು, ಬೆಲೆ ಐತಿಹಾಸಿಕ ಮಟ್ಟಕ್ಕೆ ತಲುಪಿದೆ. ಗುರುವಾರದ ವಹಿವಾಟಿನಲ್ಲಿ 900 ರೂಪಾಯಿ ಏರಿಕೆ ಕಂಡ ಚಿನ್ನದ ಬೆಲೆ ದಾಖಲೆಯ ಮಟ್ಟ ತಲುಪಿತು. ಸದ್ಯ ಬಂಗಾರದ ದರ 10 ಗ್ರಾಂಗೆ 62,000 ರೂಪಾಯಿ ಆಗಿದೆ. ಜಾಗತಿಕ ಮಾರುಕಟ್ಟೆಯ ಪ್ರಬಲ ಪ್ರವೃತ್ತಿಯ ನಡುವೆ ರಾಷ್ಟ್ರ ರಾಜಧಾನಿಯ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 900 ರೂಪಾಯಿಗಿಂತಲೂ ಅಧಿಕ ಏರಿಕೆ ಕಂಡಿತು.

ಇದೇ ಮೊದಲ ಬಾರಿಗೆ 10 ಗ್ರಾಂ ಬಂಗಾರದ ಬೆಲೆ 62 ಸಾವಿರ ರೂಪಾಯಿ ದಾಟಿದೆ. ಕಳೆದ ವಹಿವಾಟಿನಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆ 61,080 ರೂಪಾಯಿ ಇತ್ತು. ಇದರೊಂದಿಗೆ ಬೆಳ್ಳಿ ಬೆಲೆಯಲ್ಲಿಯೂ ಏರಿಕೆಯಾಗಿದೆ. ಬೆಳ್ಳಿ ಬೆಲೆ 660 ರೂಪಾಯಿ ಜಿಗಿತದೊಂದಿಗೆ ಕೆಜಿಗೆ 76,700 ರೂಪಾಯಿಗೆ ತಲುಪಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ವೇಗದ ಬೆನ್ನಲ್ಲೇ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನವು ದಾಖಲೆಯ ಎತ್ತರವನ್ನು ಮುಟ್ಟಿತು.

ವಿದೇಶಿ ಮಾರುಕಟ್ಟೆಯಲ್ಲೂ ಬಂಗಾರ ಏರುಗತಿಯಲ್ಲಿ ಸಾಗುತ್ತಿದೆಪ್ರತಿ ಔನ್ಸ್ ಚಿನ್ನದ ಬೆಲೆ 2,039.50 ಡಾಲರ್‌ನಷ್ಟಾಗಿದೆ. ಬೆಳ್ಳಿ ಔನ್ಸ್‌ಗೆ  25.50 ಡಾಲರ್‌ ಆಗಿದೆ. ಮದುವೆ ಸೀಸನ್‌ನಲ್ಲೇ ಬಂಗಾರ ಬಲು ದುಬಾರಿಯಾಗಿರೋದು ಜನಸಾಮಾನ್ಯರನ್ನು ಕಳವಳಕ್ಕೀಡುಮಾಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read