BIG NEWS: ಮತದಾರರನ್ನು ಸೆಳೆಯಲು ಬಿಜೆಪಿ ಮುಖಂಡರಿಂದ ಸೀರೆ ಹಂಚಿಕೆ; ಸೀರೆಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು

ಚಿಕ್ಕಮಗಳೂರು: ವಿಧನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಯುಗಾದಿ ಹಬ್ಬವೂ ಆಗಮಿಸುತ್ತಿದ್ದು, ಮತದಾರರ ಓಲೈಕೆಗಾಗಿ ಬಿಜೆಪಿ ಶಾಸಕ ಸಿ.ಟಿ.ರವಿ ತಮ್ಮ ಕ್ಷೇತ್ರದಲ್ಲಿ ಸೀರೆ ಹಂಚಿಕೆ ಮಾಡಿದ್ದಾರೆ.

ಚಿಕ್ಕಮಗಳೂರಿನ ಮಲ್ಲೇನಹಳ್ಳಿಯಲ್ಲಿ ಬಿಜೆಪಿ ಮುಖಂಡರು ಗ್ರಾಮಸ್ಥರಿಗೆ ಸೀರೆ ಹಂಚಿದ್ದಾರೆ. ಅಭಿವೃದ್ಧಿ ಕಾರ್ಯಗಳನ್ನು ಮಾಡದೇ ಈಗ ಸೀರೆ ಹಂಚುವ ಮೂಲಕ ವೋಟಿಗಾಗಿ ನಾಟಕವಾಡುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೊಂದೆಡೆ ಭಕ್ತರಹಳ್ಳಿಯಲ್ಲಿ ಬಿಜೆಪಿಯವರು ಹಂಚಿದ್ದ ಸೀರೆ ತೆಗೆದುಕೊಂಡ ಗ್ರಾಮಸ್ಥರು ಕೆಜಿ ಅಕ್ಕಿ ಕೊಡುವ ಯೋಗ್ಯತೆ ಇಲ್ಲ, ಈಗ ಸೀರೆ ಹಂಚುತ್ತಿದ್ದೀರಾ? ಎಂದು ಕಿಡಿಕಾರಿರುವ ಗ್ರಾಮಸ್ಥರು ಬಿಜೆಪಿ ಮುಖಂಡರು ಕೊಟ್ಟ ಸೀರೆಯನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ‌ ಕೇಳಲು ಬಂದ ಬಿಜೆಪಿ ಮುಖಂಡರು ಗ್ರಾಮದಿಂದಲೇ ಪರಾರಿಯಾಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read