BIG NEWS: ಬಿಟ್ ಕಾಯಿನ್ ಹಗರಣ; ಮರುತನಿಖೆಗೆ ಆದೇಶ

ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಬಿಟ್ ಕಾಯಿನ್ ಪ್ರಕರಣವನ್ನು ರಾಜ್ಯ ಸರ್ಕಾರ ಮರುತನಿಖೆಗೆ ಆದೇಶಿಸಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ.ಜಿ. ಪರಮೇಶ್ವರ್, ಈ ಹಿಂದೆ ಬಿಜೆಪಿ ಸರ್ಕಾರದ ಬಿಟ್ ಕಾಯಿನ್ ವಿಚಾರವಾಗಿ ಲಕ್ಷಾಂತರ ಕೋಟಿ ಹಗರಣದ ಬಗ್ಗೆ ನಾವು ಹೇಳಿದ್ದೆವು. ಬಿಟ್ ಕಾಯಿನ್ ಹಗರಣದ ಬಗ್ಗೆ ಮರುತನಿಖೆಗೆ ಆದೇಶ ನೀಡಿದ್ದೇವೆ. ಅದರಂತೆ ಸಿಐಡಿ ಅಡಿಯಲ್ಲಿ ಎಸ್ ಐ ಟಿ ರಚನೆ ಮಾಡಲಾಗಿದೆ ಎಂದರು.

ಹಗರಣದಲ್ಲಿ ಟೆಕ್ನಿಕಲ್, ಅಂತರಾಜ್ಯ, ಅಂತರಾಷ್ಟ್ರೀಯ ವಿಚಾರಗಳಿರುವುದರಿಂದ ನಿಗದಿತ ಸಮಯದಲ್ಲಿ ತನಿಖೆ ಮುಗಿಯಲಿದೆ ಎಂದು ಹೇಳಲು ಆಗುವುದಿಲ್ಲ ಎಂದು ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read