ಬೆಂಗಳೂರು: ಸಿದ್ದು ನಿಜ ಕನಸುಗಳು ಎಂಬ ಪುಸ್ತಕ ಬಿಡುಗಡೆ ಮೂಲಕ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ತೇಜೋವಧೆಗೆ ಮುಂದಾಗಿದ್ದ ರಾಜ್ಯ ಬಿಜೆಪಿ ವಿರುದ್ಧ ಸಮರ ಸಾರಿರುವ ಕಾಂಗ್ರೆಸ್ ಇದೀಗ ಹೊಸ ಅಭಿಯಾನ ಆರಂಭಿಸಿದೆ. ಬಿಜೆಪಿ ಪಾಪ ಪತ್ರ, ಬಿಜೆಪಿ ಪಾಪದ ಪುರಾಣ ಎಂಬ ಹ್ಯಾಷ್ ಟ್ಯಾಗ್ ನೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಅಸ್ತ್ರ ಪ್ರಯೋಗಿಸಿದೆ.
BJP ಪಾಪದ ಪುರಾಣ ಇದೆಯೇ ಹೊರತು ಸಾಧನೆ ಪುರಾಣವಿಲ್ಲ. ಸಾವಿರಾರು ಕೋಟಿಯಲ್ಲಿ ಶಾಸಕರ ಖರೀದಿ, ಸಿಡಿ ಬ್ಲಾಕ್ಮೇಲ್ ರಚನೆಯಾದ ಬಿಜೆಪಿ ಸರ್ಕಾರದಲ್ಲಿ
BJPvsBJP ಕಿತ್ತಾಟ, ಅರಾಜಕತೆ, ಭ್ರಷ್ಟಾಚಾರ ನಿರಂತರವಾಗಿದೆ. ಸರ್ಕಾರವನ್ನು ತಳ್ಳಿಕೊಂಡು ಹೋಗ್ತಿದೇವೆ, ಮ್ಯಾನೇಜ್ ಮಾಡ್ತಿದೇವೆ ಎಂದ ಮಾಧುಸ್ವಾಮಿಯವರ ಹೇಳಿಕೆಯೇ ಇದಕ್ಕೆ ಸಾಕ್ಷಿ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಆಪರೇಷನ್ ಕಮಲವೆಂಬ ಅನೈತಿಕತೆಯಿಂದ ಹುಟ್ಟಿದ ಪಾಪದ ಕೂಸು ಬಿಜೆಪಿ ಸರ್ಕಾರ. ಈ ಸರ್ಕಾರ ಹುಟ್ಟಿದ್ದೂ ಅನೈತಿಕತೆಯಿಂದಲೇ, ನಡೆಯುತ್ತಿರುವುದು ಅನೈತಿಕ ಮಾರ್ಗದಲ್ಲೇ, ಅವಸಾನವಾಗುವುದೂ ಅನೈತಿಕತೆಯ ಕಾರಣದಿಂದಲೇ. ಆಪರೇಷನ್ ಕಮಲದಲ್ಲಿ – ಇನ್ವೆಸ್ಟ್‌ಮೆಂಟ್, 40% ಕಮಿಷನ್‌ನಲ್ಲಿ – ರಿಟರ್ನ್ಸ್ ರಿಕವರಿ! ಇದೇ ಬಿಜೆಪಿ ಸರ್ಕಾರದ ಸಾಧನೆ ಎಂದು ಸರಣಿ ಟ್ವೀಟ್ ಮೂಲಕ ಕಿಡಿಕಾರಿದೆ.
https://twitter.com/INCKarnataka/status/1612689176172068865
https://twitter.com/INCKarnataka/status/1612674984815783938