BIG NEWS: ಬಿಜೆಪಿಯವರಿಗೆ ಸೋಲನ್ನು ವಿಮರ್ಶೆ ಮಾಡಿ ಒಪ್ಪಿಕೊಳ್ಳಲೂ ಆಗುತ್ತಿಲ್ಲ; ಅವರು ಪ್ರತಿಭಟನೆ ಮಾಡುತ್ತಾ ವಿಪಕ್ಷದಲ್ಲೇ ಇರಬೇಕು ಎಂದು ಟಾಂಗ್ ನೀಡಿದ ಡಿಸಿಎಂ

ಬೆಂಗಳೂರು: ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ನಾವು ನೀಡಿದ ಭರವಸೆಯಂತೆ ಜಾರಿಗೆ ತರುತ್ತೇವೆ. ಅನಗತ್ಯವಾಗಿ ಬಿಜೆಪಿ ನಾಯಕರು ಜನರಲ್ಲಿ ಗೊಂದಲ ಉಂಟುಮಾಡುವುದು ಬೇಡ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಒಂದು ಕಾಳು ಅಕ್ಕಿ ಕಡಿಮೆ ಆದರೂ ಬಿಜೆಪಿ ನಾಯಕರು ಸದನದ ಒಳಗೂ ಹೊರಗೂ ಪ್ರತಿಭಟನೆ ಮಾಡುವುದಾಗಿ ಹೇಳಿದ್ದಾರೆ. ಅವರು 365 ದಿನವೂ ಪ್ರತಿಭಟನೆ ಮಾಡಲಿ. ಅವರಿಗೆ ಚುನಾವಣೆಯ ಸೋಲನ್ನು ವಿಮರ್ಶೆ ಮಾಡಿ ಒಪ್ಪಿಕೊಳ್ಳಲೂ ಆಗುತ್ತಿಲ್ಲ ಎಂದರು.

ಬಿಜೆಪಿಯವರು ಹೋರಾಟ ಮಾಡುತ್ತಿರಬೇಕು, ವಿಪಕ್ಷದಲ್ಲಿಯೇ ಕೂತಿರಬೇಕು. ನಾವು ಆಡಳಿತ ಪಕ್ಷದಲ್ಲಿ ಜನರ ಸೇವೆ ಮಾಡುತ್ತಿರಬೇಕು ಎಂದು ಟಾಂಗ್ ನೀಡಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read