BIG NEWS: ಪಶು ಆಸ್ಪತ್ರೆಯಲ್ಲಿ ಸಿಬ್ಬಂದಿಯಿಂದ ಹಿಡಿದು ಲಸಿಕೆವರೆಗೂ ಕೊರತೆ ಸೃಷ್ಟಿಸಿರುವಾಗ ಉಚಿತ ಕೊಡುಗೆ ಏನು ? ಕಾಂಗ್ರೆಸ್ ಪ್ರಶ್ನೆ

ಬೆಂಗಳೂರು: ಸರ್ಕಾರಿ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಉಚಿತವೇ, ಆದರೂ ಪ್ರಣಾಳಿಕೆಯಲ್ಲಿ ‘ಉಚಿತ’ ಚಿಕಿತ್ಸೆ ನೀಡುತ್ತೇವೆ ಎಂದಿತ್ತು ರಾಜ್ಯ ಬಿಜೆಪಿ. ಜನರಿಗೆ ಮಂಕುಬೂದಿ ಎರಚುವ ಹೊಸ ಬಗೆ ಇದು ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಪಶು ಆಸ್ಪತ್ರೆ ಸಿಬ್ಬಂದಿ ಕೊರತೆ, ವೈದ್ಯರ ಕೊರತೆ, ಔಷಧ, ಲಸಿಕೆಗಳ ಕೊರತೆ ಸೃಷ್ಟಿಸಿರುವ ಬಿಜೆಪಿ ಸರ್ಕಾರ ಉಚಿತ ಕೊಡುವುದು ಏನನ್ನು? ಎಂದು ಪ್ರಶ್ನಿಸಿದೆ.

ಪ್ರಭಾವಿಗಳನ್ನು ರಕ್ಷಿಸುವ ಸಲುವಾಗಿ PSI ಹಗರಣದ ತನಿಖೆ ಕೆಲವೇ ಜನರ ಬಂಧನಕ್ಕೆ ಸೀಮಿತವಾಗಿತ್ತು. ಈಗ ಬಂಧಿತ ಆರೋಪಿಗಳಿಗೆ ಜಾಮೀನು ದೊರಕಿದೆ. ಆಡಿಯೋ ಒಂದರಲ್ಲಿ ಆರೋಪಿಗಳಿಗೆ ಜಾಮೀನು ಸಿಗಲು ಸರ್ಕಾರದ ವೈಫಲ್ಯವೇ ಕಾರಣ ಎಂದು ಗೃಹಸಚಿವರು ಒಪ್ಪಿದ್ದರು. ಇದು ವೈಫಲ್ಯವೋ, ಉದ್ದೇಶಪೂರ್ವಕ ಸಹಕಾರವೋ ಗೃಹ ಸಚಿವ ಅರಗ ಜ್ಞಾನೇಂದ್ರ ಅವರೇ? ಎಂದು ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ಕೇಳಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read