BIG NEWS: ನಾನು ಹಾಸನ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು ನಿಜ ಆದರೆ……..; ಭವಾನಿ ರೇವಣ್ಣ ಹೇಳಿದ್ದೇನು ?

ಹಾಸನ: ನಾನು ಹಾಸನ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದು ನಿಜ. ಆ ನಿಟ್ಟಿನಲ್ಲಿ ಹೋರಾಟ ಮಾಡಿದ್ದೂ ಸತ್ಯ. ಆದರೆ ಅಭ್ಯರ್ಥಿ ಘೋಷಣೆಯಾದ ಬಳಿಕ ಸ್ವರೂಪ್ ಅವರನ್ನು ಬೆಂಬಲಿಸಿದ್ದೇನೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಪತ್ನಿ ಭವಾನಿ ರೇವಣ್ಣ ತಿಳಿಸಿದ್ದಾರೆ.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಭವಾನಿ ರೇವಣ್ಣ, ಬಿಜೆಪಿ ಶಾಸಕ ಪ್ರೀತಂ ಗೌಡ ಮಹಿಳೆ ಎಂಬುದನ್ನೂ ಲೆಕ್ಕಿಸದೇ ಸವಾಲು ಹಾಕಿದ್ದರು. ಮನಬಂದಂತೆ ಮಾತನಾಡಿದ್ದರು. ಇದನ್ನೆಲ್ಲ ಕೇಳಿ ಕೇಳಿ ಎಷ್ಟು ಅಂತ ಸಹಿಸೋದು ಎಂದು ಹಾಸನದಿಂದ ಸ್ಪರ್ಧೆಗೆ ಯೋಚಿಸಿದ್ದೆ. ನಾನು ಯಾವುದೇ ಚಾಲೆಂಜ್ ಮಾಡಲಿಲ್ಲ, ಬೇರೆಯವರಿಗೆ ಚಾಲೆಂಜ್ ಮಾಡುವ ಸಂಸ್ಕೃತಿ ನಮಗಿಲ್ಲ ಎಂದರು.

ನನಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ಬೇಸರವಿಲ್ಲ. ಸ್ವರೂಪ್ ನನ್ನು ಮಗನಂತೆ ಬೆಳೆಸಿದ್ದೇವೆ. ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲುವುದು ಮುಖ್ಯ, ಪಕ್ಷದ ಒಗ್ಗಟ್ಟು ಮುಖ್ಯ ಎಂದರು. ಯಾವತ್ತೂ ದೇವೇಗೌಡರ ಕುಟುಂಬದಲ್ಲಿ ಒಡಕು ಮೂಡಲು ಸಾಧ್ಯವಿಲ್ಲ. ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಗೆಲ್ಲಬೇಕು ಅಷ್ಟೇ. ಆ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read