BIG NEWS: ನಾನು ಈ ಸಲ ಟಿಕೆಟ್ ಬೇಡ ಅಂದಿದ್ದೆ, ಆದ್ರೆ ಜನರ ಒತ್ತಾಯ ಅಂದ್ರು…; ಕಣ್ಣೀರಿಟ್ಟ ಸಚಿವ ಕಾರಜೋಳ

ಬಾಗಲಕೋಟೆ: 29 ವರ್ಷಗಳ ಕಾಲ ಮುಧೋಳದ ಜನರು ಪ್ರೀತಿ, ವಿಶ್ವಾಸ ತೋರಿದ್ದಾರೆ. ದಿ.ರಾಮಕೃಷ್ಣ ಹೆಗಡೆ ಹಾಗೂ ಎಸ್.ಆರ್.ಬೊಮ್ಮಾಯಿ ಅವರನ್ನು ನೆನಪಿಸಿಕೊಳ್ಳಬೇಕು ಎಂದು ತಮ್ಮ ರಾಜಕೀಯ ಜೀವನದ ಆರಂಭದ ದಿನಗಳನ್ನು ಸಚಿವ ಗೋವಿಂದ ಕಾರಜೋಳ ಮೆಲುಕು ಹಾಕಿದ್ದಾರೆ.

ಮುಧೋಳದಲ್ಲಿ ಮಾತನಾಡಿದ ಸಚಿವ ಕಾರಜೋಳ, ನಾನು ಈ ಸಲ ಟಿಕೆಟ್ ಬೇಡ ಅಂದಿದ್ದೆ. ಆದರೆ ಜನರ ಬಯಕೆ ಇದೆ ನಿಲ್ಲುವಂತೆ ಒತ್ತಾಯ ಮಾಡಿದ್ರು ಎಂದು ಭಾವುಕರಾದರು.

ಇದೇ ವೇಳೆ ಮಾಜಿ ಸಚಿವ ಎಸ್.ಆರ್.ಪಾಟೀಲ್ ಬಿಜೆಪಿಗೆ ಬಂದ್ರೆ ಸ್ವಾಗತ. ಅವರಿಗೆ ಅವಮಾನ ಮಾಡಿದ್ದನ್ನು ನೋಡಿದರೆ ನೀವು ಕಾಂಗ್ರೆಸ್ ಬಗ್ಗೆ ಮಾತೇ ಆಡಬಾರದು. ಕಾಂಗ್ರೆಸ್ ಬಗ್ಗೆ ನಿಮಗೆ ಅರ್ಥವಾಗಿದೆ. ಎಸ್.ಆರ್.ಪಾಟೀಲ್ ಒಬ್ಬ ಹಿರಿಯ ರಾಜಕಾರಣಿ. ನಮ್ಮ ಜಿಲ್ಲೆಯಲ್ಲಿ ಎಲ್ಲರಿಗೂ ಮಾರ್ಗದರ್ಶನ ಮಾಡುವ ಹಿರಿಯರು. ಅವರು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದರೆ ಸಂತೋಷವಾಗಿ ಸ್ವಾಗತ ಮಾಡುತ್ತೇನೆ ಎಂದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read