BIG NEWS: ತಾಕತ್ತಿದ್ದರೆ ನನ್ನನ್ನು ಹೊಡೆದುಹಾಕಿ ನೋಡೋಣ; ಸಚಿವ ಅಶ್ವತ್ಥನಾರಾಯಣ ವಿರುದ್ಧ ಮತ್ತೆ ಗುಡುಗಿದ ಸಿದ್ದರಾಮಯ್ಯ

ಬೆಂಗಳೂರು: ಟಿಪ್ಪು ಹೊಡೆದಂತೆ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಬೇಕು ಎಂಬ ಸಚಿವ ಅಶ್ವತ್ಥನಾರಾಯಣ ಅವರ ಹೇಳಿಕೆಗೆ ಮತ್ತೆ ಕಿಡಿ ಕಾರಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಹೊಡೆಯುವುದು, ಬಡಿಯುವುದು ಎಲ್ಲಾ ಬಾಯಲ್ಲಿ ಹೇಳಿದಷ್ಟು ಸುಲಭವಲ್ಲ, ಕೊಲೆ ಮಾಡ್ತೀವಿ ಎಂದು ಹೆದರಿಸಿದ ಮಾತ್ರಕ್ಕೆ ನಾನು ಹೆದರುವವನಲ್ಲ ಎಂದು ಗುಡುಗಿದ್ದಾರೆ.

ವಿಧಾನಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಅರಗ ಜ್ಞಾನೆಂದ್ರ ಅವರೇ ನೀವು ಒಳ್ಳೆಯವರೇ ಆದರೆ ಗೃಹ ಇಲಾಖೆ ನಡೆಸಲು ಅಸಮರ್ಥರಿದ್ದೀರಿ. ನಿಮ್ಮ ಇಲಾಖೆ ಸತ್ತು ಹೋಗಿದೆ ಎಂದು ವಾಗ್ದಾಳಿ ನಡೆಸಿದರು. ನೀವು ಸಮರ್ಥರಿದ್ದರೆ, ಸಚಿವ ಅಶ್ವತ್ಥನಾರಾಯಣ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಿರಿ ಎಂದು ವಾಗ್ದಾಳಿ ನಡೆಸಿದರು.

ಅಶ್ವತ್ಥನಾರಾಯಣ ಅವರ ಹೇಳಿಕೆ ಪ್ರಚೋದನಕಾರಿ ಹೇಳಿಕೆಯಲ್ಲವೇ? ಅದರೂ ಯಾಕೆ ಕ್ರಮ ಕೈಗೊಂಡಿಲ್ಲ? ತಾಕತ್ತು, ಧಮ್ ಇದ್ದರೆ ನನ್ನನ್ನು ಹೊಡೆದು ಹಾಕಿ ನೋಡೋಣ.

ನಾನು ಎದುರಿಸಲು ಸಿದ್ಧನಿದ್ದೇನೆ. ಹೊಡೆದು ಹಾಕ್ತೀವಿ, ಕೊಲೆ ಮಾಡ್ತೀವಿ ಎಂದು ಹೇಳಿದ ಮಾತ್ರಕ್ಕೆ ಹೆದರುವವನು ನಾನಲ್ಲ, ಅಥವಾ ನಮ್ಮ ನಿಲುವಿನಲ್ಲಿ ಯಾವುದೇ ರೀತಿಯ ಬದಲಾವಣೆಯೂ ಆಗುವುದಿಲ್ಲ ಎಂದು ಹೇಳಿದರು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read