ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ಕಮಿಷನ್ ದುರಾಸೆಗೆ ಬೆಂಗಳೂರು ರಸ್ತೆಗಳು ಕಿತ್ತುಹೋಗಿವೆ ಎಂದು ರಾಜ್ಯ ಕಾಂಗ್ರೆಸ್ ಘಟಕ ವಾಗ್ದಾಳಿ ನಡೆಸಿದೆ.
ಬೆಂಗಳೂರಿನ ಕೆಲ ರಸ್ತೆಗಳನ್ನು ಪಾದಚಾರಿಗಳಿಗೆ ಮಾತ್ರವೆಂದು ಗುರುತಿಸುತ್ತೇವೆ ಎಂದಿತ್ತು ಬಿಜೆಪಿ ಸರ್ಕಾರ. ಆದರೆ ಈಗ ಪಾದಚಾರಿಗಳು ಗುಂಡಿಗಳಲ್ಲಿ ರಸ್ತೆಯನ್ನೇ ಹುಡುಕುವಂತಾಗಿದೆ! ಎಂದು ಟೀಕಿಸಿದೆ.
ಪಾದಚಾರಿ ಮಾರ್ಗಗಳಲ್ಲಿ “ಹಳೆ ಕಲ್ಲು ಹೊಸ ಬಿಲ್ಲು” ಎಂಬ 40% ಕಮಿಷನ್ ಕಾಮಗಾರಿ ನಡೆಸಿ ಓಡಾಡಲು ಬರದಂತ ಸ್ಥಿತಿ ನಿರ್ಮಿಸಲಾಗಿದೆ ಎಂದು ಬಿಜೆಪಿಗೆ ಕಾಂಗ್ರೆಸ್ ಚಾಟಿ ಬೀಸಿದೆ.
https://twitter.com/INCKarnataka/status/1631155089699373056?ref_src=twsrc%5Egoogle%7Ctwcamp%5Eserp%7Ctwgr%5Etweet