BIG NEWS: ಕಾರು ಏರುವಾಗ ಆಯತಪ್ಪಿ ಬಿದ್ದ ಸಚಿವ ಸೋಮಣ್ಣ

ಚಾಮರಾಜನಗರ: ಸಚಿವ ವಿ.ಸೋಮಣ್ಣ ಪರ ನಟ ಕಿಚ್ಚ ಸುದೀಪ್ ಚಮರಾಜನಗರ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದು, ಈ ವೇಳೆ ಕೊಂಚ ಅವಘಡ ಸಂಭವಿಸಿದೆ.

ನಟ ಸುದೀಪ್ ಅವರನ್ನು ನೋಡಲು ಬಂದ ಅಭಿಮಾನಿಗಳು ನೆಚ್ಚಿನ ನಟನ ಬಳಿಗೆ ಧಾವಿಸಿ ಬಂದಿದ್ದಾರೆ. ಈ ವೇಳೆ ನಟ ಸುದೀಪ್ ಕಾರಿನ ಮೇಲೆ ನಿಂತು ಜನರತ್ತ ಕೈ ಬೀಸುತ್ತಿದ್ದಾಗ ಓರ್ವ ಅಭಿಮಾನಿ ಕಿಚ್ಚನ ಕೈ ಹಿಡಿಯಲು ಹೋಗಿ ಆಯತಪ್ಪಿ ಸಚಿವ ವಿ.ಸೋಮಣ್ಣ ಮೇಲೆ ಬಿದ್ದಿದ್ದಾರೆ. ಅಭಿಮಾನಿಯೊಂದಿಗೆ ಸಚಿವ ಸೋಮಣ್ಣ ಕೂಡ ಆಯ ತಪ್ಪಿ ಕೆಳಗೆ ಬಿದ್ದಿದ್ದಾರೆ.

ತಕ್ಷಣ ಕಿಚ್ಚ ಸುದೀಪ್ ಹಾಗೂ ಇತರರು ಸಚಿವರನ್ನು ಮೇಲಕ್ಕೆತ್ತಿದ್ದು, ಸಚಿವರು ಸಾವರಿಸಿಕೊಂಡು ಪ್ರಚಾರ ಕಾರ್ಯ ಮುಂದುವರೆಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read