BIG NEWS: ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಯತ್ನಾಳ್; ಗಾಂಧಿ ಕುಟುಂಬದ ವಿರುದ್ಧವೂ ನಾಲಿಗೆ ಹರಿಬಿಟ್ಟ ಬಿಜೆಪಿ ಶಾಸಕ

ಕುಂದಗೋಳ: ವಿಧಾನಸಭಾ ಚುನಾವಣಾ ಅಖಾಡದಲ್ಲಿ ರಾಜಕೀಯ ಪಕ್ಷಗಳ ನಾಯಕರು ಪರಸ್ಪರ ವಾಕ್ಪ್ರಹಾರ ನಡೆಸುವ ಬರದಲ್ಲಿ ನಾಲಿಗೆ ಹರಿಬಿಡುತ್ತಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಮೂರು ಬಿಟ್ಟವರು ಇದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.

ಕುಂದಗೋಳದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಯತ್ನಾಳ್, ಕಾಂಗ್ರೆಸ್ ಪಕ್ಷದಲ್ಲಿ ಮೂರು ಬಿಟ್ಟವರು ಇದ್ದಾರೆ, ಎಲ್ಲಾ ಬಿಟ್ಟು ನಿಂತ ಸೋನಿಯಾ, ರಾಹುಲ್ ಇದ್ದಾರೆ. ಊರ ಬದ್ಮಾಷ್ ಗಳು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಮೋದಿಯವರು ಪ್ರಧಾನಿಯಾಗಿದ್ದಕ್ಕೆ ಇವರು ಹತಾಶರಾಗಿದ್ದಾರೆ ಎಂದು ಬಾಯಿಗೆ ಬಂದಂತೆ ಭಾಷಣ ಮಾಡಿದ್ದಾರೆ.

ಅಲ್ಲದೇ ಗಾಂಧಿ ಕುಟುಂಬದ ವಿರುದ್ಧವೂ ವಾಗ್ದಾಳಿ ನಡೆಸಿರುವ ಯತ್ನಾಳ್, ಇದು ಮಹಾತ್ಮಾ ಗಾಂಧಿ ಕಾಂಗ್ರೆಸ್ ಅಲ್ಲ, ಇದು ನಕಲಿ ಗಾಂಧಿಗಳ ಕಾಂಗ್ರೆಸ್ ಆಗಿದೆ. ಇವರ ಅಡ್ಡ ಹೆಸರು ಗಾಂಧಿ ಅಲ್ಲವೇ ಅಲ್ಲ, ಇವರು ಒರಿಜಿನಲ್ ಗಾಂಧಿಗಳೂ ಅಲ್ಲ. ಇವರದ್ದು ಯಾವುದೋ ಖಾನ್ ಗಳ ಕಂಪನಿ. ಗಾಂಧಿ ಕುಟುಂಬ ಮಿಕ್ಸ್ ವೆಜಿಟೇಬಲ್ಸ್ ಇದ್ದಂತೆ. ಒಂದು ಇಟಲಿ ಪ್ರಾಡೆಕ್ಟ್, ಇಂಡಿಯಾ ಪ್ರಾಡೆಕ್ಟ್, ಒಂದು ಖಾನ್ ಪ್ರಾಡೆಕ್ಟ್ ಎಂದು ಹೇಳುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read