BIG NEWS: ಕಲುಷಿತ ನೀರು ಸೇವಿಸಿ 88 ಮಕ್ಕಳು ಸೇರಿದಂತೆ 127 ಜನರು ಅಸ್ವಸ್ಥ

ಬೆಂಗಳೂರು: ಕೊಪ್ಪಳ, ರಾಯಚೂರು ಬಳಿಕ ಇದೀಗ ಬೆಂಗಳೂರಿನಲ್ಲಿಯೂ ಕಲುಷಿತ ನೀರು ಸೇವಿಸಿ ಜನರು ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ.

ಬೆಂಗಳೂರಿನ ಆನೇಕಲ್ ಬಳಿಯ ಮಹಾವೀರ್ ರಾಂಚಸ್ ಅಪಾರ್ಟ್ ಮೆಂಟ್ ನಲ್ಲಿ ಈ ಘಟನೆ ನಡೆದಿದೆ. ಅಪಾರ್ಟ್ ಮೆಂಟ್ ನಿವಾಸಿಗಳು ಕಲುಷಿತ ನೀರು ಸೇವನೆಯಿಂದ ಅಸ್ವಸ್ಥರಾಗಿದ್ದಾರೆ. 88 ಮಕ್ಕಳು ಸೇರಿದಂತೆ 127 ಜನರು ವಾಂತಿ-ಬೇಧಿಯಿಂದ ಬಳಲುತ್ತಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಧ್ಯ ಇಬ್ಬರು ಮಕ್ಕಳು ಹೊರತುಪಡಿಸಿ ಉಳಿದ ಮಕ್ಕಳು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ಅಪಾರ್ಟ್ ಮೆಂಟ್ ನ ಟ್ಯಾಂಕರ್ ನೀರು ಕಲುಷಿತಗೊಂಡಿದ್ದರಿಂದ ನೀರು ಸೇವಿಸಿದ ಅಪಾರ್ಟ್ ಮೆಂಟ್ ನಿವಾಸಿಗಳು ಅಸ್ವಸ್ಥರಾಗಿದ್ದಾರೆ ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read