ಮಹಾರಾಷ್ಟ್ರದ ಎರಡು ಪ್ರಮುಖ ನಗರಗಳ ಹೆಸರು ಬದಲಾವಣೆಗೆ ಕೇಂದ್ರ ಸರ್ಕಾರ ತನ್ನ ಒಪ್ಪಿಗೆ ಸೂಚಿಸಿದೆ. ಹೀಗಾಗಿ ಔರಂಗಾಬಾದ್ ಇನ್ನು ಮುಂದೆ ಛತ್ರಪತಿ ಸಾಂಬಾಜಿ ನಗರ್ ಆಗಲಿದ್ದರೆ, ಉಸ್ಮಾನಾಬಾದ್ ಹೆಸರನ್ನು ಧಾರಾಶಿವ್ ಎಂದು ಬದಲಾಯಿಸಲಾಗುತ್ತದೆ.
ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆಗೆ ಯಾವುದೇ ವಿರೋಧವಿಲ್ಲವೆಂದು ಕೇಂದ್ರ ಸರ್ಕಾರ ತಿಳಿಸಿದ್ದು, ಉಪ ಮುಖ್ಯಮಂತ್ರಿ ದೇವೇಂದ್ರ ಪಡ್ನವೀಸ್ ಈ ಪತ್ರವನ್ನು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.
ಬಹಳ ಕಾಲದ ಹಿಂದೆಯೇ ಶಿವಸೇನೆ ಸರ್ವೋಚ್ಚ ನಾಯಕರಾಗಿದ್ದ ಬಾಳಠಾಕ್ರೆ ಸಾಹೇಬ್ ಈ ಎರಡು ನಗರಗಳ ಹೆಸರು ಬದಲಾವಣೆಗೆ ಒತ್ತಾಯಿಸಿದ್ದರು. ಬಳಿಕ ಅಧಿಕಾರಕ್ಕೆ ಬಂದ ಉದ್ದವ್ ಠಾಕ್ರೆ ನೇತೃತ್ವದ ಮೈತ್ರಿ ಸರ್ಕಾರ ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡಿತ್ತಾದರೂ ಮಿತ್ರ ಪಕ್ಷಗಳಾದ ಕಾಂಗ್ರೆಸ್ ಹಾಗೂ ಎನ್‌ಸಿಪಿ ಅಸಮ್ಮತಿ ವ್ಯಕ್ತಪಡಿಸಿದ್ದವು.
ಇದೀಗ ಉದ್ಧವ್ ಠಾಕ್ರೆ ನಂತರ ಬಿಜೆಪಿ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂದಿರುವ ಏಕನಾಥ ಶಿಂಧೆ ನೇತೃತ್ವದ ಶಿವಸೇನೆಯ ಮತ್ತೊಂದು ಬಣ ಬಾಳಠಾಕ್ರೆಯವರ ಕನಸನ್ನು ಸಾಕಾರಗೊಳಿಸಿದೆ.
https://twitter.com/Dev_Fadnavis/status/1629114071017742336?ref_src=twsrc%5Etfw%7Ctwcamp%5Etweetembed%7Ctwterm%5E1629114071017742336%7Ctwgr%5E1394432d5b11d247483ebdb75d9deb4e677d7fea%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Findiatoday-epaper-dh270e11982dfa46bb8c2f9b6c27103d59%2Faurangabadisnowchhatrapatisambhajinagarosmanabadisdharashivaftercentresnod-newsid-n474810186