BIG NEWS: ಏರೋ ಇಂಡಿಯಾ ಏರ್ ಶೋಗೆ ಪ್ರಧಾನಿ ಮೋದಿ ಚಾಲನೆ; ಬಾನಂಗಳದಲ್ಲಿ ಲೋಹದ ಹಕ್ಕಿಗಳ ಕಲರವ ಆರಂಭ

ಬೆಂಗಳೂರು: ಇಂದಿನಿಂದ 5 ದಿನಗಳ ಕಾಲ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯಲಿರುವ ಏರೋ ಇಂಡಿಯಾ-2023 ಏರ್ ಶೋಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.

ಯಲಹಂಕ ಏರ್ ಬೇಸ್ ನಲ್ಲಿ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ಏರೋ ಇಂಡಿಯಾದ 14ನೇ ಆವೃತ್ತಿಗೆ ಪ್ರಧಾನಿ ಮೋದಿ ಚಲನೆ ನೀಡಿದ್ದು, ಸಾರಂಗ್ ಹೆಲಿಕಾಪ್ಟರ್ ಗಳಿಂದ ಪ್ರಧಾನಿ ಮೋದಿಯವರಿಗೆ ಗೌರವ ವಂದನೆ ಸಲ್ಲಿಸಲಾಯಿತು.

ಹಾಕ್ ಯುದ್ಧವಿಮಾನಗಳ ವೈಭವದ ಹಾರಾಟ ನಡೆಸಿದರೆ, ನೇತ್ರಾ ಯುದ್ಧವಿಮಾನಗಳು ಬಾನಂಗದಲ್ಲಿ ಚಿತ್ತಾರ ಮೂಡಿಸಿದವು. ಮಿಗ್-29, ಜಾಗ್ವಾರ್, ಸುಖೋಯ್ ವಿಮಾನಗಳ ವೈಮಾನಿಕ ಹಾರಾಟ ಆರಂಭವಾಗಿದೆ. ಇಂದಿನಿಂದ ಸಿಲಿಕಾನ್ ಸಿಟಿಯಲ್ಲಿ ಲೋಹದ ಹಕ್ಕಿಗಳ ಕಲರವಕ್ಕೆ ಅದ್ಧೂರಿ ಚಾಲನೆ ದೊರೆತಿದೆ.

ವೈಮಾನಿಕ ಪ್ರದರ್ಶನದಲ್ಲಿ ಭಾರತದ ಅತ್ಯುತಮ ಯುದ್ಧವಿಮಾನಗಳು ಆಗಸದಲ್ಲಿ ಮಿಂಚುಹರಿಸಲಿವೆ. ಅಮೆರಿಕ ಸೇರಿದಂತೆ ವಿಶ್ವದ ಅತ್ಯಂತ ಶಕ್ತಿಶಾಲಿ ಯುದ್ಧವಿಮಾನಗಳು ಪ್ರದರ್ಶನಗೊಳ್ಳಲಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read