BIG NEWS: ಉತ್ತರ ಪ್ರದೇಶ ಮಾಡೆಲ್ ಬೇಕು ಅನ್ನುವವರು ಅಲ್ಲಿಗೆ ಹೋಗಲಿ; ಬಿಜೆಪಿ ನಾಯಕರಿಗೆ HDK ತಿರುಗೇಟು

ಮಂಡ್ಯ: ಯುಪಿ ಸಿಎಂ ಯೋಗಿ ಆದಿತ್ಯನಾಥ್ ಮಂಡ್ಯಕ್ಕೆ ಬಂದು ಏನು ಸಂದೇಶ ಕೊಟ್ಟು ಹೋದರು? ಬುಲ್ಡೋಜರ್ ತೆಗೆದುಕೊಂಡು ಬರ್ತಿನೀ ಅಂದ್ರಾ? ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿನ ಆದಿಚುಂಚನಗಿರಿ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಕರ್ನಾಟಕವನ್ನು ಯುಪಿ ಮಾಡೆಲ್ ಮಾಡುವುದಾಗಿ ಹೇಳುತ್ತಿದ್ದಾರೆ. ದೇಶಕ್ಕೆ ಕರ್ನಾಟಕವೇ ಮಾಡೆಲ್. ನಮಗೆ ಯುಪಿ ಮಾಡೆಲ್ ಬೇಡ. ಉತ್ತರ ಪ್ರದೇಶ ಮಾಡೆಲ್ ಬೇಕು ಎನ್ನುವವರು ಅಲ್ಲಿಗೆ ಹೋಗಲಿ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ರಾಮನಗರದ ಚನ್ನಪಟ್ಟಣಕ್ಕೆ ಭೇಟಿ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, ಪ್ರಧಾನಿ ಮೋದಿ ಚನ್ನಪಟ್ಟಣಕ್ಕೆ ಬರಬಾರದು ಅಂತೇನೂ ಇಲ್ಲ. ಇನ್ನೂ ಎರಡು ಬಾರಿ ಮೋದಿಯವರು ಚನ್ನಪಟ್ಟಣಕ್ಕೆ ಬಂದು ಹೋಗಲಿ ಎಂದು ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read