BIG NEWS: ಈಗ ಯಾರನ್ನು ನೇಣಿಗೆ ಹಾಕುವಿರಿ……? ಜೋಷಿ, ಸಂತೋಷ್ ತಲೆಮರೆಸಿಕೊಂಡಿದ್ದು ನೇಣಿನ ಭಯಕ್ಕೋ……? ಬಿಜೆಪಿ ಕಾಲೆಳೆದ ರಾಜ್ಯ ಕಾಂಗ್ರೆಸ್ ಘಟಕ

ಬೆಂಗಳೂರು: ಹೊಸಬರಿಗೆ ಟಿಕೆಟ್ ನೀಡಿದವರನ್ನು ನೇಣಿಗೆ ಹಾಕಿ ಎಂದು ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಹೇಳಿಕೆ ಕೊಟ್ಟಿದ್ದಾರೆ. ಈಗ ಯಾರನ್ನು ನೇಣಿಗೆ ಹಾಕುವಿರಿ ಎಂದು ಪ್ರಶ್ನಿಸುವ ಮೂಲಕ ರಾಜ್ಯ ಕಾಂಗ್ರೆಸ್ ಘಟಕ ಬಿಜೆಪಿ ಕಾಲೆಳೆದಿದೆ.

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ವಿಚಾರವಾಗಿ ಸರಣಿ ಟ್ವೀಟ್ ಮೂಲಕ ಪ್ರಶ್ನಿಸಿರುವ ಕಾಂಗ್ರೆಸ್, ಈಗ ಯಾರನ್ನು ನೇಣಿಗೆ ಹಾಕುವಿರಿ? ಅಮಿತ್ ಷಾ ಅವರನ್ನೋ? ಬಿ.ಎಲ್.ಸಂತೊಷ್ ಅವರನ್ನೋ? ಪ್ರಹ್ಲಾದ್ ಜೋಷಿ ಅವರನ್ನೋ? ಮೋದಿಯವರನ್ನೋ? ಬೊಮ್ಮಾಯಿ ಅವರನ್ನೋ? ಹೊಣೆ ಯಾರು? ನೇಣುಗಂಬ ಯಾರಿಗೆ? ಸೋಲಿನ ನಾಯಕತ್ವ ವಹಿಸಿಕೊಳ್ಳುವವರು ಯಾರು? ಬಿಜೆಪಿಯಿಂದ ಉತ್ತರ ನಿರೀಕ್ಷಿಸಬಹುದೇ? ಎಂದು ಕೇಳಿದೆ.

ಗೆಲುವಿನ ಹೊಣೆಯನ್ನು ಮೋದಿ ಹೊರುತ್ತಿದ್ದರು, ಈಗ ಸೋಲಿನ ಹೊಣೆಯನ್ನು ಯಾರು ಹೊರುತ್ತಾರೆ? ರಮೇಶ್ ಜಿಗಜಿಣಗಿ ಹೇಳಿದಂತೆ ಯಾರನ್ನು ನೇಣಿಗೆ ಹಾಕುವಿರಿ? ಯಾರನ್ನು ಕಡಿಯುವಿರಿ? ಜೋಷಿ, ಸಂತೋಷ್ ತಲೆಮರೆಸಿಕೊಂಡಿದ್ದು ನೇಣಿನ ಭಯಕ್ಕೋ? ಕಾಲು ಕಡಿಯುವ ಭಯಕ್ಕೋ? ಅಂದಹಾಗೆ ನಿಮ್ಮ ಚಾಣಾಕ್ಯ ಎಲ್ಲಿ? ಪತ್ತೆಯೇ ಇಲ್ಲವಲ್ಲ? ಎಂದು ಅಣಕಿಸಿದೆ.

https://twitter.com/INCKarnataka/status/1668914030046752769?ref_src=twsrc%5Egoogle%7Ctwcamp%5Eserp%7Ctwgr%5Etweet

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read