BIG NEWS: ಅಮುಲ್ ನೊಂದಿಗೆ ನಂದಿನಿ ವಿಲೀನ; ಕನ್ನಡ ಕಾಮಧೇನುವಿನ ಕೆಚ್ಚಲು ಕೊಯ್ಯಲು ಹೊರಟ ಬಿಜೆಪಿ; ಸರ್ಕಾರದ ವಿರುದ್ಧ ಕಾಂಗ್ರೆಸ್ ಆಕ್ರೋಶ

ಬೆಂಗಳೂರು: ನಂದಿನಿ ಎಂಬ ಕನ್ನಡ ಕಾಮಧೇನುವಿನ ಕೆಚ್ಚಲು ಕೊಯ್ಯಲು ಬಿಜೆಪಿ ಹೊರಟಿದೆ ಎಂದು ರಾಜ್ಯ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ಅಮುಲ್ + ನಂದಿನಿ ವಿಲೀನ ಎಂದ ಅಮಿತ್ ಶಾ ಮೊಸರಿಗೆ ದಹಿ ಹೆಸರು ಕಡ್ಡಾಯಗೊಳಿಸಿದರು. KMF ಹಾಲು ಪೂರೈಕೆಯಲ್ಲಿ ಉದ್ದೇಶಪೂರ್ವಕ ವ್ಯತ್ಯಯ ಸೃಷ್ಟಿಸಿದರು. ಈಗ ಅಮೂಲ್ ಮೂಲಕ ನಂದಿನಿಯನ್ನು ನಂಬಿದ ರಾಜ್ಯದ ರೈತರನ್ನು ಸರ್ವನಾಶ ಮಾಡುತ್ತಿದೆ ಕರ್ನಾಟಕ ವಿರೋಧಿ ಬಿಜೆಪಿ ಸರ್ಕಾರ ಎಂದು ವಾಗ್ದಾಳಿ ನಡೆಸಿದೆ.

ಅಮುಲ್ + ನಂದಿನಿ ವಿಲೀನ ಎಂದರು. ಮೊಸರಿಗೆ ಹಿಂದಿಯ ‘ದಹಿ’ ಇರಲೇಬೇಕು ಎಂದರು. KMFಗೆ ಹಾಲು ನೀಡುವ ರೈತರಿಗೆ 5,6 ತಿಂಗಳಿಂದ ಸಹಾಯ ಧನ ನಿಲ್ಲಿಸಿದರು. ಉದ್ದೇಶಪೂರ್ವಕವಾಗಿ ‘ನಂದಿನಿ’ ಉತ್ಪನ್ನಗಳ ಕೊರತೆ ಸೃಷ್ಟಿಸಿದರು. ಈಗ ಅಮೂಲ್‌ನ್ನು ಕರ್ನಾಟಕಕ್ಕೆ ತಂದುಬಿಟ್ಟರು. ಬಿಜೆಪಿ ನಂದಿನಿಯ ಕೆಚ್ಚಲು ಕೊಯ್ಯುತ್ತಿದೆ ಎಂದು ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ಕಿಡಿಕಾರಿದೆ.

https://twitter.com/INCKarnataka/status/1644602378761674755

https://twitter.com/INCKarnataka/status/1644599427645177856

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read