BIG NEWS: ಅಣ್ಣ ಸಿಎಂ ಆಗಲ್ಲ ಅಂತ ಗೊತ್ತಾಗಿದೆ; ಅದ್ಕೆ ಡಿ.ಕೆ. ಸುರೇಶ್ ನಿವೃತ್ತಿ ಮಾತನಾಡುತ್ತಿದ್ದಾರೆ; ಹೊಸ ಬಾಂಬ್ ಸಿಡಿಸಿದ ಮಾಜಿ ಸಚಿವ ಆರ್. ಅಶೋಕ್

ಬೆಂಗಳೂರು: ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೊಡಲ್ಲ, ಪವರ್ ಶೇರಿಂಗ್ ಆಗಲ್ಲ, ಅಧಿಕಾರ ಹಂಚಿಕೆ ಎಂಬುದು ಒಂದು ನಾಟಕವಷ್ಟೇ ಎಂದು ಮಾಜಿ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್. ಅಶೋಕ್, ಡಿ ಕೆ ಶಿವಕುಮಾರ್ ಅವರದ್ದು ಮುಖ್ಯಮಂತ್ರಿ ಕನಸಷ್ಟೇ. ಯಾವ ಕಾರಣಕ್ಕೂ ಡಿ.ಕೆ. ಶಿವಕುಮಾರ್ ಸಿಎಂ ಆಗಲ್ಲ. ಸಿದ್ದರಾಮಯ್ಯ ಚಾಣಾಕ್ಯ ರಾಜಕಾರಣಿ. ಡಿಕೆಶಿ ಅವರಂತ ರಾಜಕಾರಣಿಯನ್ನು ಬಹಳಷ್ಟು ನೋಡಿದ್ದಾರೆ. ರಾಜಸ್ಥಾನ, ಮಧ್ಯಪ್ರದೇಶದಲ್ಲಿಯೂ ಮೊದಲಿಗೆ ಅಧಿಕಾರ ಹಂಚಿಕೆ ಎಂದು ಹೇಳಲಾಗಿತ್ತು. ಆದರೆ ಅಧಿಕಾರ ಹಂಚಿಕೆಗೆ ಒಪ್ಪಲಿಲ್ಲ. ಆ ಎರಡೂ ರಾಜ್ಯದ ನಾಯಕರಿಗಿಂತಲೂ ಸಿದ್ದರಾಮಯ್ಯ ಪವರ್ ಫುಲ್. ಯಾವ ಕಾರಣಕ್ಕೂ ಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೊಡಲ್ಲ. ಈ ಬೇಸರದಿಂದಾಗಿಯೇ ಡಿ.ಕೆ. ಸುರೇಶ್ ರಾಜಕೀಯ ನಿವೃತ್ತಿ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಡಿ.ಕೆ. ಶಿವಕುಮಾರ್ ಅವರದ್ದು ಸಿಎಂ ಆಗುವುದು ಕೇವಲ ಕನಸಷ್ಟೇ. ಡಿ.ಕೆ. ಶಿವಕುಮಾರ್ ಗೆ ಅಧಿಕಾರ ತಪ್ಪಿದ್ದಕ್ಕೆ ಡಿ.ಕೆ. ಸುರೇಶ್ ಗೆ ಬೇಸರವಾಗಿದೆ. ಅಣ್ಣ ಸಿಎಂ ಆಗಲ್ಲ ಎಂಬುದೂ ಗೊತ್ತಾಗಿದೆ. ಹಾಗಾಗಿ ಅವರು ನಿವೃತ್ತಿ ಮಾತುಗಳನ್ನಾಡುತ್ತಿದ್ದಾರೆ. ರಾಜಕೀಯದಿಂದ ದೂರ ಉಳಿಯುವುದಾಗಿ ಹೇಳುತ್ತಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read