BIG NEW: ಅಕ್ರಮ ನೇಮಕಾತಿ; ಕಾಂಬೋಡಿಯಾದಲ್ಲಿ ಸಿಲುಕಿರುವ ತೀರ್ಥಹಳ್ಳಿ ಇಂಜಿನಿಯರ್; ತವರಿಗೆ ಕರೆತರಲು ಗೃಹ ಸಚಿವರಿಂದ ಕ್ರಮ

ಬೆಂಗಳೂರು: ಶಿವಮೊಗ್ಗ ಜಿಲೆ ತೀರ್ಥಹಳ್ಳಿ ಮೂಲದ ಸಾಫ್ಟ್ ವೇರ್ ಇಂಜಿನಿಯರ್ ಕಿರಣ್ ಶೆಟ್ಟಿ ಎಂಬುವವರು ಅಕ್ರಮ ನೇಮಕಾತಿ ಜಾಲಕ್ಕೆ ಸಿಲುಕಿ ಕಾಂಬೋಡಿಯಾದಲ್ಲಿ ಸಿಲುಕಿಕೊಂಡಿರುವ ಘಟನೆ ನಡೆದಿದೆ.

ಕಿರಣ್ ಶೆಟ್ಟಿ ಅವರನ್ನು ಥಾಯ್ಲೆಂಡ್ ನಲ್ಲಿ ಹೆಚ್ಚಿನ ಸಂಬಳದ ಕೆಲಸ ಕೊಡಿಸುವುದಾಗಿ ಆಮಿಷವೊಡ್ದಿ ದುಷ್ಕರ್ಮಿಗಳ ಗುಂಪು ಕಾಂಬೋಡಿಯಾಗೆ ಕರೆಸಿಕೊಂಡಿತ್ತು. ಆದರೆ ಅಕ್ರಮ ನೇಮಕಾತಿ ಜಾಲದಲ್ಲಿ ಕಾಂಬೋಡಿಯಾದಲ್ಲಿ ಬಂಧಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಸಧ್ಯ ಅವರು ಕಾಂಬೋಡಿಯಾದಲ್ಲಿ ಖಾಸಗಿ ಸಂಸ್ಥೆ ವಶದಲ್ಲಿದ್ದಾರೆ.

ಕಿರಣ್ ಶೆಟ್ಟಿ ಅವರನ್ನು ವಾಪಸ್ ತವರಿಗೆ ಕರೆಸಿಕೊಳ್ಳುವ ನಿಟ್ಟಿನಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಯತ್ನಿಸುತ್ತಿದ್ದು, ವಿದೇಶಾಂಗ ಇಲಾಖೆ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದಾರೆ. ಕಿರಣ್ ಶೆಟ್ಟಿ ಅವರನ್ನು ಸುರಕ್ಷಿತವಾಗಿ ಕರೆತರುವ ನಿಟ್ಟಿನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ವಿದೇಶಾಂಗ ಇಲಾಖೆ ರಾಜ್ಯ ಸಚಿವ ವಿ. ಮುರಳಿಧರನ್ ಹಾಗೂ ಅಧಿಕಾರಿಗಳ ಜತೆ ಸಂಪರ್ಕದಲ್ಲಿದ್ದಾರೆ ಎಂದು ತಿಳಿದುಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read