ಕಿರು ಬೆರಳಿನ ‘ಉಗುರು’ ಬಿಡುವ ಹಿಂದಿದೆಯಂತೆ ಈ ಉದ್ದೇಶ

ಕೈನ ಕೊನೆ ಬೆರಳು ಕಿರು ಬೆರಳು. ಎಲ್ಲ ಕೆಲಸಕ್ಕೂ ಇದು ಬಳಕೆಯಾಗುವುದಿಲ್ಲ. ಹಾಗಾಗಿಯೇ ಈ ಕಿರು ಬೆರಳಿನ ಉಗುರನ್ನು ಉದ್ದಗೆ ಬಿಡ್ತಾರೆ ಕೆಲವರು. ಇದು ಈಗ ಫ್ಯಾಷನ್. ಕೈ ಅಂದವನ್ನು ಹೆಚ್ಚಿಸುತ್ತೆ ಎನ್ನುವ ಕಾರಣಕ್ಕೆ ಮಹಿಳೆ, ಪುರುಷ ಎನ್ನದೆ ಎಲ್ಲರೂ ಉಗುರು ಬಿಡ್ತಾರೆ. ಆದ್ರೆ ಈ ಉಗುರು ಬಿಡುವ ಹಿಂದೆ ಉದ್ದೇಶವೊಂದಿತ್ತು.

ಹೌದು, ಹಿಂದಿನ ಕಾಲದಲ್ಲಿ ಕೇವಲ ಫ್ಯಾಷನ್ ಗಾಗಿ ಕಿರು ಬೆರಳಿನ ಉಗುರು ಬಿಡ್ತಾ ಇರಲಿಲ್ಲ. ಬದಲಾಗಿ ಇದು ಉನ್ನತಿಯ ಸಂಕೇತವಾಗಿತ್ತು. ಶ್ರೀಮಂತರು ಉಗುರು ಬಿಡ್ತಾ ಇದ್ದರು. ಸಮಾಜದಲ್ಲಿ ಮಾನ್ಯತೆ ಸಿಗಲಿ ಎನ್ನುವ ಕಾರಣಕ್ಕೆ ಉದ್ದಗೆ ಉಗುರು ಬಿಡ್ತಿದ್ದರು.

ಏಷ್ಯಾದ ವಿವಿಧ ದೇಶಗಳಲ್ಲಿ ಕಿರು ಬೆರಳಿನ ಉಗುರು ಬಿಡುವುದು ಒಂದು ಫ್ಯಾಷನ್ ಆಗಿತ್ತು. ನಂತ್ರ ಕಾರ್ಮಿಕ ವರ್ಗದಿಂದ ಪ್ರತ್ಯೇಕವಾಗಿದ್ದ ಜನರು ಉದ್ದನೆ ಉಗುರು ಬಿಡಲು ಶುರುಮಾಡಿದ್ರು. ಉಗುರಿನ ಉದ್ದ ನೋಡಿ ಆತನಿಗೆ ಸಮಾಜದಲ್ಲಿ ಯಾವ ಸ್ಥಾನವಿದೆ ಎಂಬುದನ್ನು ಪತ್ತೆ ಹಚ್ಚಲಾಗ್ತಾ ಇತ್ತು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read