ಶಾರೂಕ್​ ಖಾನ್​ರನ್ನ ನೈಸರ್ಗಿಕ ಸಂಪನ್ಮೂಲವೆಂದ ಆನಂದ್​ ಮಹೀಂದ್ರಾ: ಹೀಗಿತ್ತು ಕಿಂಗ್​ ಖಾನ್​ ರಿಯಾಕ್ಷನ್​

ಬಾಲಿವುಡ್​ ಕಿಂಗ್​ ಖಾನ್​ ಎನಿಸಿಕೊಂಡಿರುವ ಶಾರೂಕ್​ ತಮ್ಮ ʼಜವಾನ್​ʼ ಸಿನಿಮಾದ ಮೂಲಕ ಮತ್ತೊಮ್ಮೆ ಬಾಕ್ಸಾಫೀಸಿನಲ್ಲಿ ಧೂಳೆಬ್ಬಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಇನ್ನು ಮಹೀಂದ್ರಾ ಗ್ರೂಪ್​ ಅಧ್ಯಕ್ಷರಾದ ಆನಂದ್ ಮಹೀಂದ್ರಾ ಶಾರೂಕ್​ ಖಾನ್​ರ ಹೊಸ ಸಿನಿಮಾವನ್ನು ಹಾಸ್ಯಮಯ ರೀತಿಯಲ್ಲಿ ಹೊಗಳಿದ್ದಾರೆ. ಶಾರೂಕ್​ ಖಾನ್​ ಕೂಡ ವಿಶಿಷ್ಠ ರೀತಿಯಲ್ಲಿ ಆನಂದ್​ ಮಹೀಂದ್ರಾಗೆ ಪ್ರತಿಕ್ರಿಯೆ ನೀಡಿದ್ದು ಈ ಪೋಸ್ಟ್​ ಸಖತ್​ ವೈರಲ್​ ಆಗಿದೆ.

ಜವಾನ್​ ಟ್ರೈಲರ್​ ನ್ನು ಐಕಾನಿಕ್​​ ಬುರ್ಜ್​ ಖಲೀಫಾದಲ್ಲಿ ಬಿಡುಗಡೆ ಮಾಡಿದ ಬಗ್ಗೆ ಮಹೀಂದ್ರಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಮೂಲಕ ದುಬೈ ಹಾಗೂ ಸೌದಿ ಅರೇಬಿಯಾದಲ್ಲಿ ಶಾರೂಕ್​ ಅಭಿಮಾನಿಗಳಿಗೆ ರಸದೌತಣ ಸಿಕ್ಕಂತಾಗಿದೆ. ಇದರ ಜೊತೆಯಲ್ಲಿ ಭಾರತೀಯ ಚಿತ್ರರಂಗದ ಜಾಗತಿಕ ವ್ಯಾಪ್ತಿಯನ್ನೂ ಇದು ಸಾರಿದೆ.

ತಮ್ಮ ಟ್ವೀಟ್​ನಲ್ಲಿ ಆನಂದ್​ ಮಹೀಂದ್ರಾ ಶಾರೂಕ್​ ಖಾನ್​ರನ್ನು ನೈಸರ್ಗಿಕ ಸಂಪನ್ಮೂಲ ಎಂದು ಘೋಷಣೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಶಾರೂಕ್​ಗೆ ಇರುವ ಜನಪ್ರಿಯತೆಯಿಂದಾಗಿ ಪ್ರಪಂಚದ ಎಲ್ಲಾ ಮೂಲೆಗಳಿಂದ ಜನರನ್ನು ಒಟ್ಟುಗೂಡಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಆನಂದ್​ ಮಹೀಂದ್ರಾ ಬರೆದುಕೊಂಡಿದ್ದಾರೆ.

ಎಲ್ಲಾ ದೇಶಗಳು ತಮ್ಮ ನೈಸರ್ಗಿಕ ಖನಿಜ ಸಂಪನ್ಮೂಲಗಳನ್ನು ಕಾಪಾಡಿಕೊಳ್ಳುತ್ತವೆ. ವಿದೇಶಿ ವಿನಿಮಯದ ಮೂಲಕ ಅವುಗಳನ್ನು ರಫ್ತು ಮಾಡುತ್ತದೆ. ಹೀಗಾಗಿ ಶಾರೂಕ್​ ಖಾನ್​​ರನ್ನೂ ನೈಸರ್ಗಿಕ ಸಂಪನ್ಮೂಲ ಎಂದು ಘೋಷಿಸುವ ಸಮಯ ಬಂದಿದೆ ಎಂದೆನಿಸುತ್ತಿದೆ ಎಂದು ಮಹೀಂದ್ರ ಬರೆದುಕೊಂಡಿದ್ದಾರೆ.

ಆನಂದ್​ ಮಹೀಂದ್ರಾರ ಈ ಪೋಸ್ಟ್​ಗೆ ಶಾರೂಕ್​ ಖಾನ್​ ಪ್ರತಿಕ್ರಿಯೆ ನೀಡಿದ್ದಾರೆ. ಧನ್ಯವಾದಗಳು. ನನ್ನ ದೇಶಕ್ಕೆ ಹೆಮ್ಮೆ ತರುವಂತಹ ಸಿನಿಮಾಗಳನ್ನು ಮಾಡಲು ನಾನು ಯತ್ನಿಸುತ್ತೇನೆ. ಆದರೆ ನೈಸರ್ಗಿಕ ಸಂಪನ್ಮೂಲಗಳಂತೆ ನಾನು ಸೀಮಿತವಾಗಿಲ್ಲ ನಾನು ಎಂದು ಬರೆದುಕೊಂಡಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read