9, 10, 11ನೇ ತರಗತಿ ಬೋರ್ಡ್ ಪರೀಕ್ಷೆ ಕೈಬಿಟ್ಟು 12ನೇ ತರಗತಿ ಮೌಲ್ಯಮಾಪನಕ್ಕೆ ಹೊಸ ವಿಧಾನ: NCERT ಶಿಫಾರಸು

ನವದೆಹಲಿ: ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಶಾಲಾ ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತರಲು ರಾಷ್ಟ್ರೀಯ ಶಿಕ್ಷಣ ಸಂಶೋಧನಾ ಮತ್ತು ತರಬೇತಿ ಪರಿಷತ್(NCERT) ಇತ್ತೀಚೆಗೆ ಶಿಫಾರಸು ಮಾಡಿದ್ದು, ವಿಭಿನ್ನ ವಿಧಾನಗಳೊಂದಿಗೆ ಹೊಸ ಮೌಲ್ಯಮಾಪನ ವ್ಯವಸ್ಥೆ ಪರಿಚಯಿಸಲು ಸಲಹೆ ನೀಡಿದೆ.

ಈ ಶಿಫಾರಸುಗಳ ಅನುಷ್ಠಾನಕ್ಕೆ ರಾಜ್ಯ ಸರ್ಕಾರಗಳಿಗೆ ಪತ್ರ ಬರೆಯುವಂತೆ ಒತ್ತಾಯಿಸಿ ಕೇಂದ್ರ ಶಿಕ್ಷಣ ಸಚಿವಾಲಯವನ್ನು ಕೋರಲಾಗಿದೆ. 9, 10 ಮತ್ತು 11ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆಗಳನ್ನು ತೆಗೆಯಬೇಕು. ಈ ವರ್ಷದ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಪಡೆದ ಅಂಕಗಳನ್ನು ಒಳಗೊಂಡಂತೆ 12ನೇ ತರಗತಿ ಫಲಿತಾಂಶದ ಮೌಲ್ಯಮಾಪನ ಮಾಡಬೇಕು ಎಂದು ಶಿಫಾರಸು ಮಾಡಲಾಗಿದೆ.

ಶೈಕ್ಷಣಿಕ ವರ್ಷವನ್ನು ಎರಡು ಕಾಲಾವಧಿಯಲ್ಲಿ ವಿಭಜಿಸಬೇಕು. 9ನೇ ತರಗತಿಯಿಂದ 12ನೇ ತರಗತಿವರೆಗೆ ಹಂತ ಹಂತವಾಗಿ ಅಂಕಗಳನ್ನು ಸರಿ ಹೊಂದಿಸಿ ಸಂಕಲನಾತ್ಮಕ ಮೌಲ್ಯಮಾಪನಕ್ಕೆ ಒತ್ತು ನೀಡಬೇಕು. 9 ರಿಂದ 12ನೇ ತರಗತಿವರೆಗೆ ವಿದ್ಯಾರ್ಥಿಗಳು ಪಡೆದ ಅಂಕಗಳನ್ನು ಪ್ರಮಾಣದಲ್ಲಿ ನಿಗದಿಪಡಿಸಬೇಕು. 9ನೇ ತರಗತಿಗೆ ಶೇಕಡ 15ರಷ್ಟು, 10ನೇ ತರಗತಿಗೆ ಶೇಕಡ 20ರಷ್ಟು, 11ನೇ ತರಗತಿಗೆ ಶೇಕಡ 25ರಷ್ಟು, 12ನೇ ತರಗತಿಗೆ ಶೇಕಡ 40ರಷ್ಟು ಮೌಲ್ಯ ನೀಡುವ ಮೂಲಕ 12ನೇ ತರಗತಿಯ ಒಟ್ಟಾರೆ ಮೌಲ್ಯಮಾಪನ ಮಾಡಬೇಕು ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read