BIG BREAKING : ವಾಹನ ಸವಾರರಿಗೆ ಗುಡ್ ನ್ಯೂಸ್ : ‘HSRP’ ನಂಬರ್ ಪ್ಲೇಟ್ ಅಳವಡಿಕೆಗೆ ಫೆ.17 ರವರೆಗೂ ಅವಕಾಶ

ಬೆಂಗಳೂರು : ವಾಹನ ಸವಾರರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ‘HSRP’ ನಂಬರ್ ಪ್ಲೇಟ್ ಅಳವಡಿಕೆಗೆ ಫೆ.17 ರವರೆಗೂ ಅವಕಾಶ ಸಿಕ್ಕಿದೆ.

ಈ ಬಗ್ಗೆ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ರಾಜ್ಯದಲ್ಲಿನ ಹಳೇ ವಾಹನಗಳಿಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಹಾಕಿಸಲು ನವೆಂಬರ್ 17 ಕೊನೆಯ ದಿನವಾಗಿತ್ತು. ಆದರೆ, ನಾವು ಈಗ ಈ ಅವಧಿಯನ್ನು ವಿಸ್ತರಣೆ ಮಾಡಲು ಚಿಂತನೆ ನಡೆಸಿದ್ದೇವೆ.   ಫೆಬ್ರವರಿ 17ರವರೆಗೂ ಸಮಯಾವಕಾಶ ನೀಡಿದ್ದೇವೆ. ಇಂದು ಸಂಜೆ ಅಥವಾ ನಾಳೆ ಗೆಜೆಟ್ ನೋಟಿಫಿಕೇಶನ್   ಬರಲಿದೆ   ಎಂದು ಮಾಹಿತಿ ನೀಡಿದ್ದಾರೆ.

HSRP’ ನಂಬರ್ ಪ್ಲೇಟ್ ಅಳವಡಿಕೆಗೆ ನ. 17 ಕೊನೇ ದಿನ ಎಂದು ತಿಳಿಸಲಾಗಿತ್ತು. ಸದ್ಯ ವಾಹನ ಸವಾರರಿಗೆ ಫೆ.17 ರವರೆಗೂ ಅವಕಾಶ ಸಿಕ್ಕಿದೆ.

01 ಏಪ್ರಿಲ್ 2019ರ ನಂತರ ನೊಂದಣಿ ಮಾಡಿಕೊಂಡ ಎಲ್ಲಾ ವಿಧದ ವಾಹನಗಳಿಗೆ ನವೆಂಬರ್ 17ರ ಒಳಗಾಗಿ ಹೆಚ್ಎಸ್ಆರ್ಪಿ (ಹೈ-ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ಸ್) ನಂಬರ್ ಪ್ಲೇಟ್ ಅಳವಡಿಸುವುದು ಕಡ್ಡಾಯವಾಗಿದೆ.
ವಾಹನ ಮಾಲೀಕರು ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಪಡೆಯಲು ಕರ್ನಾಟಕ ಸಾರಿಗೆ ಇಲಾಖೆವೆಬ್ಸೈಟ್ https://transport.karnataka.gov.in ಅಥವಾ www.siam.in ಭೇಟಿ ನೀಡಿ, ವೆಬ್ಸೈಟ್ನಲ್ಲಿ ವಾಹನದ ಉತ್ಪಾದಕ ಕಂಪನಿ ಹಾಗೂ ಇತರೆ ಮೂಲಭೂತ ಮಾಹಿತಿಗಳನ್ನು ಭರ್ತಿ ಮಾಡಬೇಕು. ಹತ್ತಿರ ಡೀಲರ್ ಸ್ಥಳವನ್ನು ನಿಗದಿ ಮಾಡಿಕೊಂಡು, ಆನ್ಲೈನ್ ಮೂಲಕವೇ ಹಣ ಪಾವತಿಸಿಬೇಕು. ನಂತರ ವಾಹನ ಮಾಲೀಕರ ಮೊಬೈಲ್ ನಂಬರ್ಗೆ ಬರುವ ಒಟಿಪಿ ಮಾಹಿತಿ ನಮೂದಿಸಿ, ದಿನಾಂಕ ಹಾಗೂ ಸಮಯ ನಿಗದಿ ಮಾಡಿಕೊಂಡು ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬಹುದು.

ಸಾರಿಗೆ ಇಲಾಖೆಯಿಂದ ಗುರುತಿಸಿದ ಮೂಲ ವಾಹನ ಉತ್ಪಾದನಕ ಕಂಪನಿಗಳು ಹಾಗೂ ಅಧಿಕೃತ ವಾಹನ ಡೀಲರ್ಗಳು ಮಾತ್ರ ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಅಳವಡಿಸಲು ಮಾನ್ಯತೆ ಹೊಂದಿರುತ್ತಾರೆ. ವಾಹನ ಮಾಲೀಕರು ವೈಬ್ಸೈಟ್ ಮೂಲಕವೇ ನೊಂದಣಿ ಮಾಡಿಕೊಂಡು ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ವಾಹನಗಳಿಗೆ ಅಳವಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read