ಮಹತ್ವದ ಬೆಳವಣಿಗೆಯಲ್ಲಿ ಕುಸ್ತಿಪಟುಗಳ ವಿರುದ್ಧ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ಬೆಂಬಲಿಸಿ ಅಯೋಧ್ಯೆಯ ಮಹಾಂತರುಗಳಿಂದ ಜೂನ್ 5ರಂದು ಹಮ್ಮಿಕೊಳ್ಳಲಾಗಿದ್ದ ರ್ಯಾಲಿಯನ್ನು ರದ್ದುಗೊಳಿಸಲಾಗಿದೆ.
ಜೂನ್ 5 ರಂದು ಅಯೋಧ್ಯೆಯ ರಾಮಕಥಾ ಪಾರ್ಕ್ ನಿಂದ ‘ಜನ ಚೇತನ ಮಹಾರ್ಯಾಲಿ’ ಯನ್ನು ಏರ್ಪಡಿಸಲಾಗಿದ್ದು, ಇದರಲ್ಲಿ ಸಾಧುಸಂತರು ಪಾಲ್ಗೊಳ್ಳಲು ನಿರ್ಧರಿಸಿದ್ದರು. ಇದಕ್ಕೆ ಪೂರ್ವಭಾವಿಯಾಗಿ ಸಭೆಯನ್ನು ಸಹ ನಡೆಸಲಾಗಿದ್ದು, ರ್ಯಾಲಿ ವೇಳೆ ಪೋಕ್ಸೋ ಕಾಯ್ದೆಯಲ್ಲಿನ ಲೋಪ ದೋಷಗಳನ್ನು ಸಹ ಖಂಡಿಸಲು ತೀರ್ಮಾನಿಸಲಾಗಿತ್ತು.
ಇದೀಗ ಏಕಾಏಕಿ ರ್ಯಾಲಿಯನ್ನು ರದ್ದುಗೊಳಿಸಲಾಗಿದ್ದು, ಜಿಲ್ಲಾಡಳಿತ ಇದಕ್ಕೆ ಅನುಮತಿ ನೀಡದಿರುವುದೇ ಕಾರಣ ಎಂದು ಹೇಳಲಾಗಿದೆ. ರಾಷ್ಟ್ರ ವ್ಯಾಪಿ ಈಗಾಗಲೇ ಈ ಪ್ರಕರಣದಿಂದ ಮುಜುಗರ ಅನುಭವಿಸುತ್ತಿದ್ದು, ಇದೀಗ ಸಾಧು ಸಂತರಿಂದ ರ್ಯಾಲಿ ನಡೆದರೆ ತಪ್ಪು ಸಂದೇಶ ಹೋದಂತಾಗುತ್ತದೆ ಎಂಬ ಕಾರಣಕ್ಕೆ ಇದನ್ನು ರದ್ದುಪಡಿಸಿರಬಹುದು ಎಂದು ಹೇಳಲಾಗಿದೆ.
https://twitter.com/PTI_News/status/1664527285666430978?ref_src=twsrc%5Etfw%7Ctwcamp%5Etweetembed%7Ctwterm%5E1664527285666430978%7Ctwgr%5E7912971ff121477d94da7afa2a4fb65bb31ec5ff%7Ctwcon%5Es1_&ref_url=https%3A%2F%2Fwww.deccanherald.com%2Fnational%2Fnorth-and-central%2Famid-ongoing-sexual-harassment-probe-brij-bhushans-show-of-strength-ayodhya-rally-postponed-1224150.html