BIG NEWS : ‘ಬಿಗ್ ಬಾಸ್’ ವಿನ್ನರ್, ಹಳ್ಳಿ ಹೈದ ಹನುಮಂತಗೆ ಹುಟ್ಟೂರಲ್ಲಿ ಅದ್ದೂರಿ ಸ್ವಾಗತ.!

ಹಾವೇರಿ: ಬಿಗ್ ಬಾಸ್ ಸೀಜನ್ -11ರ ವಿನ್ನರ್ ಹನುಮಂತಗೆ ಹಾವೇರಿ ಜಿಲ್ಲೆಯ ಹುಟ್ಟೂರಿನಲ್ಲಿ ಭರ್ಜರಿ ಸ್ವಾಗತ ಕೋರಲಾಗಿದೆ. ಬಿಗ್ ಬಾಸ್ ಸೀಜನ್ ಗೆದ್ದ ಬಳಿಕ ಹನುಮಂತ ಇದೇ ಮೊದಲ ಬಾರಿಗೆ ಹುಟ್ಟೂರಿಗೆ ಮರಳಿದ್ದಾರೆ.

ಹನುಮಂತ ಹುಟ್ಟೂರಾದ ಹಾವೇರಿ ಜಿಲ್ಲೆಯ ಚಿಲ್ಲೂರಬಡ್ನಿಯಲ್ಲಿ ಅದ್ದೂರಿ ಸ್ವಾಗತ ಕೋರಲಾಗಿದೆ. ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದಿಂದ ಚಿಲ್ಲೂರಬಡ್ನಿ ಊರಿನವರೆಗೂ 10 ಕೀ.ಮೀ ರೋಡ್ ಶೋ ಮೂಲಕ ಮೆರವಣಿಗೆ ಮಾಡಿ ಊರ ಜನರು ಹನುಮಂತನನ್ನು ಬರಮಾಡಿಕೊಂಡಿದ್ದಾರೆ. ನಮ್ಮೂರ ಹುಡುಗ ಬಿಗ್ ಬಾಸ್ ವಿನ್ನರ್ ಆದ ಎಂದು ಹಾಡು ಹಾಡಿ ಕುಣಿದು ಕುಪ್ಪಳಿಸಿದ್ದಾರೆ.

ಊರಿನ ಜನರು ಹನುಮಂತನಿಗೆ ಜಯಘೋಷಗಳನ್ನು ಕೂಗಿ ಸಂಭ್ರಮದಿಂದ ಸ್ವಾಗತಿಸಿದ್ದಾರೆ. ಈ ವೇಳೆ ಮಾತನಾಡಿದ ಹನುಮಂತ, ಬಿಗ್ ಬಾಸ್ ಕಪ್ ಗೆದ್ದಿದ್ದಕ್ಕೆ ಬಹಳ ಕುಷಿಯಾಗಿದೆ. ನಾನು ಗೆಲ್ಲುತ್ತೇನೆ ಎಂಬ ನಿರೀಕ್ಷೆ ಇರಲಿಲ್ಲ. ಯಾವುದೇ ಟೆನ್ಶನ್ ಇಲ್ಲದೇ ಆರಾಮವಾಗಿ ಆಟವಾಡಿ ಬಂದಿದ್ದೇನೆ ಎಂದು ಹೇಳಿದರು. ಇನ್ನು ಧನರಾಜ್ ನನ್ನ ಉತ್ತಮ ದೋಸ್ತ. ಒಳ್ಳೆಯ ಮನುಷ್ಯ. ಅವರ ಬಗ್ಗೆ ಹೇಳಲು ಮಾತುಗಳೇ ಬರುತ್ತಿಲ್ಲ. ತುಂಬಾ ಒಳ್ಳೆಯ ದೋಸ್ತ ಎಂದು ಖುಷಿ ಹಂಚಿಕೊಂಡರು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read