ಬೀದರ್: ವಿಜಯಪುರದ ಬಳಿಕ ಬೀದರ್ ನಲ್ಲಿಯೂ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 3.0 ತೀವ್ರತೆ ದಾಖಲಾಗಿದೆ.
ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಮುದ್ನಾಳ್ ಗ್ರಾಮದಲ್ಲಿ ಭೂಕಂಪ ಸಂಭವಿಸಿದ್ದು, ಭೂಕಂಪದ ಕೇಂದ್ರಬಿಂದು ಹುಮ್ನಾಬಾದ್ ತಾಲೂಕಿನ ಇಟಗಾ ಗ್ರಾಮದಿಂದ 5.1 ಕಿ.ಮೀ ಪಶ್ಚಿಮದಲ್ಲಿ, ಚಿಟಗುಪ್ಪ ತಾಲೂಕಿನ ಕೊಡಂಬಲ್ ಗ್ರಾಮದಿಂದ 7.3 ಪಶ್ಚಿಮದಲ್ಲಿ ಸಂಭವಿಸ್ದೆ.
ಅತಿ ಕಡಿಮೆ ಒತ್ತಡದ ಭೂಕಂಪವಾಗಿದ್ದು, ಯಾವುದೇ ಹಾನಿ ಸಂಭವಿಸಿಲ್ಲ. ಜನರು ಆತಂಕಪಡುವ ಅಗತ್ಯವಿಲ್ಲ ಎಂದು ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣ ಕೇಂದ್ರ ತಿಳಿಸಿದೆ.

 
			 
		 
		 
		 
		 Loading ...
 Loading ... 
		 
		 
		