ನವದೆಹಲಿ: ಬಿದಿರು, ಮರ ಮೊದಲಾದ ಅರಣ್ಯ ಉತ್ಪನ್ನಗಳನ್ನು ದೇಶಾದ್ಯಂತ ಸುಗಮವಾಗಿ ಸಾಗಾಟ ಮಾಡಲು ಅನುಕೂಲವಾಗುವಂತೆ ರಾಷ್ಟ್ರೀಯ ಸಾಗಾಟ ಪಾಸ್ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ.
ಕೇಂದ್ರ ಪರಿಸರ, ಅರಣ್ಯ ಸಚಿವ ಭೂಪೇಂದ್ರ ಯಾದವ್ ಶುಕ್ರವಾರ ರಾಷ್ಟ್ರೀಯ ಸಾಗಾಟ ಪಾಸ್ ವ್ಯವಸ್ಥೆ(NTPS) ಗೆ ಚಾಲನೆ ನೀಡಿದ್ದಾರೆ. ರಾಜ್ಯಗಳಿಗೆ ಸಂಬಂಧಿಸಿದ ನಿಯಮಗಳ ಆಧಾರದಲ್ಲಿ ಮರ ಹಾಗೂ ಅರಣ್ಯ ಉತ್ಪನ್ನಗಳ ಸಾಗಾಟಕ್ಕೆ ಪ್ರಸ್ತುತ ಅನುಮತಿ ನೀಡಲಾಗುತ್ತಿದೆ.
ಒಂದು ದೇಶ ಒಂದು ಪಾಸ್ ಪರಿಕಲ್ಪನೆಯ ಆಧಾರದಲ್ಲಿ ರಾಷ್ಟ್ರೀಯ ಸಾಗಾಟ ಪಾಸ್ ವ್ಯವಸ್ಥೆ ರೂಪಿಸಲಾಗಿದೆ. ಮರಗಳನ್ನು ಬೆಳೆಸುವವರಿಗೆ, ರೈತರಿಗೆ ಮರಗಳ ಸಾಗಾಟಕ್ಕೆ ಏಕೀಕೃತವಾಗಿ ಆನ್ಲೈನ್ ಮೂಲಕ ಟ್ರಾನ್ಸಿಟ್ ಪರ್ಮಿಟ್ ನೀಡಲಾಗುವುದು ಎನ್ನಲಾಗಿದೆ.
ಪ್ರಸ್ತುತ, ರಾಜ್ಯದ ನಿರ್ದಿಷ್ಟ ಸಾರಿಗೆ ನಿಯಮಗಳ ಆಧಾರದ ಮೇಲೆ ಮರದ ಮತ್ತು ಅರಣ್ಯ ಉತ್ಪನ್ನಗಳ ಸಾಗಣೆಗೆ ಸಾರಿಗೆ ಪರವಾನಗಿಗಳನ್ನು ನೀಡಲಾಗುತ್ತದೆ. NTPS ಅನ್ನು “ಒಂದು ರಾಷ್ಟ್ರ-ಒಂದು ಪಾಸ್” ಆಡಳಿತವಾಗಿ ಕಲ್ಪಿಸಲಾಗಿದೆ. ಇದು ದೇಶದಾದ್ಯಂತ ತಡೆರಹಿತ ಸಾರಿಗೆಯನ್ನು ಸಕ್ರಿಯಗೊಳಿಸುತ್ತದೆ.
https://twitter.com/byadavbjp/status/1740663167653654537