ಅಪ್ಪ – ಮಗನ ಆತ್ಮಹತ್ಯೆ ಕೇಸ್‌ ಗೆ ಬಿಗ್‌ ಟ್ವಿಸ್ಟ್….!‌ ಸಾವಿಗೆ ಕಾರಣವಾಯ್ತಾ ಷೇರು ಮಾರುಕಟ್ಟೆಯಲ್ಲಿನ ನಷ್ಟ ?

ಮುಂಬೈನ ಭಾಯಂದರ್ ರೈಲು ನಿಲ್ದಾಣದಲ್ಲಿ ತಂದೆ-ಮಗ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರನ್ನು ಬೆಚ್ಚಿ ಬೀಳಿಸಿದೆ. ಹರೀಶ್ ಮೆಹ್ತಾ ಮತ್ತು ಅವರ ಪುತ್ರ ಜಯ್ ಮೆಹ್ತಾ ಕೈ ಹಿಡಿದು ರೈಲಿನ ಮುಂದೆ ಜಿಗಿದಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಗಮನಾರ್ಹ ನಷ್ಟ ಮತ್ತು ಸಾಲದಿಂದ ಬೇಸತ್ತು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆದ್ರೆ ಹರೀಶ್ ಮೆಹ್ತಾ ಕುಟುಂಬ ಮಾತ್ರ ಇದಕ್ಕೆ ಭಿನ್ನವಾದ ಹೇಳಿಕೆ ನೀಡ್ತಿದೆ.

ವಸಂತ ನಗ್ರಿ ಪ್ರದೇಶದಲ್ಲಿ ನೆಲೆಸಿರುವ ಹರೀಶ್ ಮೆಹ್ತಾ ಅವರು ತಮ್ಮ ಪುತ್ರ ಜಯ್ ಮೆಹ್ತಾ ಅವರೊಂದಿಗೆ ಸೋಮವಾರ ಭಾಯಂದರ್ ರೈಲು ನಿಲ್ದಾಣದಿಂದ ನೈಗಾಂವ್ ಕಡೆಗೆ ಚಲಿಸುತ್ತಿದ್ದ ಲೋಕಲ್ ರೈಲಿನ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತರ ಗುರುತು ಪತ್ತೆ ಮಾಡಿದ ನಂತ್ರ ಇಬ್ಬರ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಮೆಹ್ತಾ ಮನೆಯಲ್ಲಿ  ಇಂಗ್ಲಿಷ್‌ನಲ್ಲಿ ಬರೆದ ಪತ್ರ ಒಂದು ಸಿಕ್ಕಿದ್ದು, ಘಟನೆಗೆ ತಾವೇ ಕಾರಣ ಎಂದು ಅದ್ರಲ್ಲಿ ಬರೆಯಲಾಗಿದೆ.

ಈ ಬಗ್ಗೆ ಪೊಲೀಸರು ವಿಚಾರಣೆ  ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಜಯ್ ಅವರ ಪತ್ನಿ, ಪತಿ ಯಾವುದೇ ರೀತಿ ಸಾಲ ಮಾಡಿರಲಿಲ್ಲ ಎಂದಿದ್ದಾರೆ. ಮೃತ ತಂದೆ ಮತ್ತು ಮಗನ ಮೊಬೈಲ್ ಫೋನ್ ಗಳನ್ನು ಪೊಲೀಸರು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ. ಸಾಲ ಪಡೆದ ಬಗ್ಗೆ ಎಲ್ಲಿಯೂ ದಾಖಲೆ ಸಿಕ್ಕಿಲ್ಲ.

https://twitter.com/Diwakar_singh31/status/1810650412690632713?ref_src=twsrc%5Etfw%7Ctwcamp%5Etweetembed%7Ctwterm%5E1810650412690632713%7Ctwgr%5E7e3432ad4e061945a3533fb4796f6047b4c9d216%7Ctwcon%5Es1_&ref_url=https%3A%2F%2Fkannadadunia.com%2Fwp-admin%2Fpost.php%3Fpost%3D1004128action%3Dedit

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read