ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ 14 ಜನ ಪಕೈಸ್ತಾನಿ ಪ್ರಜೆಗಳು ನೆಲೆಸಿದ್ದು, ಆದರೆ ಅವರಿಗೆ ಗಡಿಪಾರು ಆದೇಶವಿಲ್ಲ ಎಂದು ತಿಳಿದುಬಂದಿದೆ.
ಭಟ್ಕಳದಲ್ಲಿ ನೆಲೆನಿಂತಿರುವ 14 ಪಾಲ್ಕಿಸ್ತಾನಿ ಪ್ರಜೆಗಳು ಹಲವು ವರ್ಷಗಳಿಂದ ಇಲ್ಲಿ ವಾಸವಾಗಿದ್ದು, ಸದ್ಯಕ್ಕೆ ಅವರ ಗಡಿಪಾರು ಎಲ್ಲ ಎನ್ನಲಾಗಿದೆ. ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ಗುಂಡಿನ ದಾಳಿಯಲ್ಲಿ 28 ಜನರು ಸಾವನ್ನಪ್ಪಿರುವ ಘಟನೆ ಬೆನ್ನಲ್ಲೇ ಕೇಂದ್ರ ಸರ್ಕಾಅರಿ ಪಾಕಿಸ್ತಾಅನಿ ಪ್ರಜೆಗಳಿಗೆ ಗಡಿಪಾರು ಆದೇಶ ನೀಡಿದೆ.
ಭಾರತದಲ್ಲಿರುವ ಪಾಕಿಸ್ತಾನಿ ಪ್ರಜೆಗಳು, ಅಧಿಕಾರಿಗಳು 48 ಗಂಟೆಗಳ ಒಳಗಾಗಿ ಭಾರತಬಿಟ್ಟು ಹೊರಡುವಂತೆ ಆದೇಶ ನೀಡಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ೧೪ ಪಾಕಿಸ್ತಾನಿ ಮೂಲದ ಮಹಿಳೆಯರಿದ್ದು, ಅವರು ದೀರ್ಘವಧಿ ವೀಸಾ ಹೊಂದಿರುವ ಕಾರಣಕ್ಕೆ ಭಟ್ಕಳದಲ್ಲೇ ಮೊಕಾ ಹೂಡಲಿದ್ದಾರೆ.
ಭಟ್ಕಳ ಹಾಗೂ ಪಾಕಿಸಾನದ ನಡುವೆ ಸ್ವತಂತ್ರಪೂರ್ವದಲ್ಲೇ ವೈವಾಹಿಕ ಸಂಬಂಧಗಳು ನಡೆಯುತ್ತಿದ್ದವು. ಭಟ್ಕಳದ ಮುಸ್ಲೀಂ ಹೆಣ್ಣುಮಕ್ಕಳನ್ನು ಪಾಕಿಸ್ತಾನದ ವರನಿಗೆ ಕೊಡುವ ಹಾಗೂ ಪಾಕಿಸ್ತಾನದ ಹೆಣ್ಣುಮಕ್ಕಳನ್ನು ಭಟ್ಕಳದ ವರನಿಗೆ ತರುವುದು ನಡೆದುಕೊಂಡು ಬಂದಿದೆ. ಹೀಗೆ ಹಲವು ವರ್ಷಗಳ ಹಿಂದೆಯೇ ಹತ್ತು ಪಾಕಿಸ್ತಾನಿ ಮೂಲದ ಮಹಿಳೆಯರು ಭಟ್ಕಳಕ್ಕೆ ಬಂದು ವಾಸವಾಗಿದ್ದು, ಅವರಿಗೆ ಭಾರತದಲ್ಲಿಯೇ ನಾಲ್ಕು ಮಕ್ಕಳು ಜನಿಸಿದ್ದಾರೆ. ಪ್ರತಿ ಎರಡು ವರ್ಷಕ್ಕೆ ಒಮ್ಮೆ ಇವರ ವೀಸಾ ನವೀಕರಿಸಲಾಗುತ್ತಿದೆ.