ಇದು ಆಶ್ರಮ, ಪ್ಲೀಸ್​ ವಿಡಿಯೋ ಮಾಡಬೇಡಿ: ಅಭಿಮಾನಿಗೆ ಕೊಹ್ಲಿ ಮನವಿ

ಆಸ್ಟ್ರೇಲಿಯಾ ವಿರುದ್ಧದ ಭಾರತ ಟೆಸ್ಟ್​ಗೆ ಮುಂಚಿತವಾಗಿ, ವಿರಾಟ್ ಕೊಹ್ಲಿ ಜನವರಿ 31ರಂದು ರಿಷಿಕೇಶದಲ್ಲಿರುವ ಸ್ವಾಮಿ ದಯಾನಂದ ಗಿರಿ ಆಶ್ರಮಕ್ಕೆ ಭೇಟಿ ನೀಡಿದ್ದರು. ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಆಶ್ರಮಕ್ಕೆ ಭೇಟಿ ನೀಡಿದರು.

ಉತ್ತರಾಖಂಡದ ಆಧ್ಯಾತ್ಮಿಕ ಸ್ಥಳದಲ್ಲಿ ಉಪಸ್ಥಿತರಿರುವ ಭಕ್ತರು ಇವರನ್ನು ವೀಕ್ಷಿಸಲು ಜಮಾಯಿಸಿದ್ದರು.

ಅಭಿಮಾನಿಗಳ ಕೋರಿಕೆಯ ಮೇರೆಗೆ ಕೊಹ್ಲಿ ಸೆಲ್ಫಿಗೆ ಪೋಸ್ ನೀಡುವುದು ಮತ್ತು ಆಟೋಗ್ರಾಫ್ ನೀಡುವುದು ಕಂಡುಬಂದಿತು. ಇದೀಗ ವಿಡಿಯೋವೊಂದು ವೈರಲ್ ಆಗಿದ್ದು, ವಿಡಿಯೋ ಚಿತ್ರೀಕರಣ ಮಾಡಬೇಡಿ ಎಂದು ಕೊಹ್ಲಿ ಅಭಿಮಾನಿಗಳಿಗೆ ಸೌಜನ್ಯದಿಂದ ಮನವಿ ಮಾಡಿರುವುದನ್ನು ನೋಡಬಹುದು. ಆಶ್ರಮವು ಚಿತ್ರೀಕರಣಕ್ಕೆ ಸೂಕ್ತ ಸ್ಥಳವಲ್ಲ ಎಂದು ಅವರು ಹೇಳಿರುವುದನ್ನು ಕೇಳಬಹುದು. ಇದು ಆಶ್ರಮ. ದಯವಿಟ್ಟು ಶೂಟ್​ ಮಾಡಬೇಡಿ ಎಂದು ವಿನಂತಿಸಿದರು.

ವೃಂದಾವನದಲ್ಲಿರುವ ಮತ್ತೊಂದು ಆಶ್ರಮದಲ್ಲಿ ಪೂಜೆ ಸಲ್ಲಿಸುತ್ತಿರುವ ಕೆಲವೇ ದಿನಗಳಲ್ಲಿ ವಿರಾಟ್ ಕೊಹ್ಲಿ ಋಷಿಕೇಶಕ್ಕೆ ಭೇಟಿ ನೀಡಿದ್ದಾರೆ. ಕೊಹ್ಲಿ ಮತ್ತು ಅನುಷ್ಕಾ, ಆಶೀರ್ವಾದ ಪಡೆಯಲು ವೃಂದಾವನದಲ್ಲಿರುವ ಆಧ್ಯಾತ್ಮಿಕ ಗುರುಗಳನ್ನು ಭೇಟಿ ಮಾಡಿದ್ದರು. ವೃಂದಾವನಕ್ಕೆ ಎರಡು ದಿನಗಳ ಪ್ರವಾಸದ ವೇಳೆ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಮತ್ತು ಮಗಳು ವಾಮಿಕಾ ಅವರೊಂದಿಗೆ ಆಶ್ರಮಕ್ಕೆ ಭೇಟಿ ನೀಡಿದ್ದರು. ದಂಪತಿ ಅಗತ್ಯವಿರುವವರಿಗೆ ಕಂಬಳಿಗಳನ್ನು ವಿತರಿಸಿದ್ದರು ಎಂದು ವರದಿಯಾಗಿದೆ.

https://twitter.com/kohlifanAmeee/status/1620307293232599041?ref_src=twsrc%5Etfw%7Ctwcamp%5Etweetembed%7Ctwterm%5E1620307293232599041%7Ctwgr%5E72ead07f43fb6848e404f7c8c2746dfebf1c26e7%7Ctwcon%5Es1_&ref_url=https%3A%2F%2Fwww.news18.com%2Fcricketnext%2Fnews%2Fbhai-ashram-hai-ye-virat-kohli-urges-fans-not-to-shoot-video-watch-6961141.html

https://twitter.com/AkshatOM10/status/1610556910130061312?ref_src=twsrc%5Etfw%7Ctwcamp%5Etweetembed%7Ctwterm

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read