ನೂರು ದಿನ ಪೂರೈಸಿದ ಸಂಭ್ರಮದಲ್ಲಿ ‘ಭಗವಂತ ಕೇಸರಿ’ ಚಿತ್ರತಂಡ

ಅನಿಲ್ ರವಿ ಪುಡಿ ನಿರ್ದೇಶನದ ನಂದಮೂರಿ ಬಾಲಕೃಷ್ಣ ಅಭಿನಯದ ‘ಭಗವಂತ ಕೇಸರಿ’ ಸಿನಿಮಾ ಕಳೆದ ವರ್ಷ ಅಕ್ಟೋಬರ್ 19 ರಂದು ತೆರೆಕಂಡಿತ್ತು.  ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದ ಈ ಚಿತ್ರ ಇದೀಗ ನೂರು ದಿನ ಪೂರೈಸಿದೆ. ಈ ಮೂಲಕ ನಂದಮೂರಿ ಬಾಲಕೃಷ್ಣ ಅವರಿಗೆ ಹ್ಯಾಟ್ರಿಕ್ ಗೆಲುವು ಸಿಕ್ಕಿದೆ. ಈ ಸಂತಸವನ್ನು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಸಿನಿ ಪ್ರೇಕ್ಷಕರಿಗೆ  ಧನ್ಯವಾದ ತಿಳಿಸಿದ್ದು, ನಂದಮೂರಿ ಬಾಲಕೃಷ್ಣ ಅವರ ಅಭಿಮಾನಿಗಳು ಈ ಸಿನಿಮಾ ಪೋಸ್ಟರ್ಗಳನ್ನು Instagram ನಲ್ಲಿ ಹಂಚಿಕೊಳ್ಳುವ ಮೂಲಕ ಸಂಭ್ರಮಿಸಿದ್ದಾರೆ.

ಈ ಚಿತ್ರದಲ್ಲಿ ನಂದಮೂರಿ ಬಾಲಕೃಷ್ಣ ಸೇರಿದಂತೆ ಸ್ಯಾಂಡಲ್ವುಡ್ನ ಶ್ರೀಲೀಲಾ, ಕಾಜಲ್ ಅಗರ್ವಾಲ್, ಆಡುಕಲಂ ನರೇನ್, ಬ್ರಹ್ಮಾಜಿ, ಭರತ್ ರೆಡ್ಡಿ, ಸುಧಾಕರ್, ಸುಬ್ಬರಾಜು, ಜಯಚಿತ್ರಾ, ಪಲ್ಲಕ್ ಲಾಲ್ವಾನಿ, ಅರ್ಜುನ್ ರಾಂಪಾಲ್, ವಿಟಿವಿ ಗಣೇಶ್, ಬಣ್ಣ ಹಚ್ಚಿದ್ದಾರೆ. ತಮನ್ ಎಸ್ ಸಂಗೀತ ಸಂಯೋಜನೆ ನೀಡಿದ್ದು, ತಮ್ಮಿರಾಜು ಛಾಯಾಗ್ರಹಣವಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read