ಮುಕೇಶ್ ಅಂಬಾನಿಯವರಿಗಿದ್ದಾರೆ ಇಬ್ಬರು ಸಹೋದರಿಯರು…! ಇಲ್ಲಿದೆ ಅವರ ಕುರಿತ ಇಂಟ್ರೆಸ್ಟಿಂಗ್ ಮಾಹಿತಿ

ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಭಾರತದ ಅತಿ ಸಿರಿವಂತ ವ್ಯಕ್ತಿ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ವೈಭವೋಪೇತ ಜೀವನ ನಡೆಸುತ್ತಿರುವ ಇವರ ಕುಟುಂಬದ ಸಮಾರಂಭಗಳು ಮಾಧ್ಯಮಗಳಲ್ಲಿ ಅತಿ ಹೆಚ್ಚು ಪ್ರಚಾರ ಪಡೆಯುತ್ತವೆ. ಇತ್ತೀಚೆಗಷ್ಟೇ ಮುಕೇಶ್ ಅಂಬಾನಿಯವರ ಪುತ್ರ ಅನಂತ್ ಅಂಬಾನಿ ವಿವಾಹ ಪೂರ್ವ ಸಮಾರಂಭ ನಡೆದಿದ್ದು, ಇದರಲ್ಲಿ ದೇಶ – ವಿದೇಶಗಳ ಗಣ್ಯ ಅತಿಥಿಗಳು ಪಾಲ್ಗೊಂಡಿದ್ದರು.

ಮುಕೇಶ್ ಅಂಬಾನಿ ಸಹೋದರ ಅನಿಲ್ ಅಂಬಾನಿ ಸಾಕಷ್ಟು ಸಿರಿವಂತಿಕೆ ಹೊಂದಿದ್ದರೂ ಸಹ ಉದ್ಯಮದಲ್ಲಿ ಅಷ್ಟೇನೂ ಯಶಸ್ಸು ಗಳಿಸಿಲ್ಲ. ರಿಲಯನ್ಸ್ ಸಂಸ್ಥಾಪಕ ಧೀರೂಭಾಯ್ ಅಂಬಾನಿ ಅವರಿಗೆ ಮುಕೇಶ್ ಅಂಬಾನಿ, ಅನಿಲ್ ಅಂಬಾನಿ ಮಾತ್ರವಲ್ಲದೆ ಇಬ್ಬರು ಪುತ್ರಿಯರೂ ಇದ್ದು, ಆದರೆ ಅವರ ಕುರಿತು ಬಹುತೇಕ ಮಂದಿಗೆ ಹೆಚ್ಚಿನ ಮಾಹಿತಿ ಇಲ್ಲ. ಅಂಬಾನಿ ಕುಟುಂಬದ ಸಮಾರಂಭಗಳಲ್ಲಿ ಮಾತ್ರ ಈ ಸಹೋದರಿಯರು ಕಾಣಿಸಿಕೊಳ್ಳುವುದರಿಂದ ಇವರ ಕುರಿತ ಹೆಚ್ಚಿನ ವಿವರ ಲಭ್ಯವಾಗುವುದಿಲ್ಲ.

ಧೀರೂಭಾಯ್ ಅಂಬಾನಿ ಹಾಗೂ ಕೋಕಿಲ ಬೆನ್ ಅವರಿಗೆ ನೀನಾ, ಮುಕೇಶ್ ಅಂಬಾನಿ, ಅನಿಲ್ ಅಂಬಾನಿ ಹಾಗೂ ದೀಪ್ತಿ ಎಂಬ ನಾಲ್ವರು ಮಕ್ಕಳಿದ್ದಾರೆ. ನೀನಾ ಅವರು 1986 ರಲ್ಲಿ ಭದ್ರಶಾಮ್ ಕೊಠಾರಿಯವರನ್ನು ವಿವಾಹವಾಗಿದ್ದು, 2015ರಲ್ಲಿ ಭದ್ರಶಾಮ್ ಕ್ಯಾನ್ಸರ್ನಿಂದ ವಿಧಿವಶರಾದರು. ಪತಿ ನಿಧನದ ನಂತರ ನೀನಾ ಕೊಠಾರಿ ತಮ್ಮ ಉದ್ಯಮವನ್ನು ಮುನ್ನಡೆಸುತ್ತಿದ್ದಾರೆ. ಇನ್ನು ದೀಪ್ತಿಯವರು ದತ್ತರಾಜ್ ಸಲ್ಗಾಂಕರ್ ಎಂಬವರನ್ನು ವಿವಾಹವಾಗಿದ್ದು, ಇವರಿಗೆ ಓರ್ವ ಪುತ್ರ ಹಾಗೂ ಪುತ್ರಿ ಇದ್ದಾರೆ. ದೀಪ್ತಿಯವರ ಮಕ್ಕಳ ಕುರಿತು ಹೆಚ್ಚಿನ ಮಾಹಿತಿ ಇಲ್ಲ. ಈ ಇಬ್ಬರು ಸಹೋದರಿಯರು ಅಂಬಾನಿ ಕುಟುಂಬದೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದು, ಸಮಾರಂಭಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ.

Mukesh Ambani Sister Nina Kothari News in Bengali, Read Latest Updates  about Mukesh Ambani Sister Nina Kothari in Bangla

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read