ಆಘಾತಕಾರಿ ಘಟನೆ: ಹುರಿದ ಕಡಲೆ ಸೇವಿಸಿ ಒಂದೇ ಕುಟುಂಬದ ಮೂವರ ಸಾವು

ಚಳಿಗಾಲದಲ್ಲಿ ಬಿಸಿ ಬಿಸಿಯಾದ ಆಹಾರ ಪದಾರ್ಥವನ್ನು ತಿನ್ನಲು ಎಲ್ಲರೂ ಬಯಸುತ್ತಾರೆ. ಹೀಗೆ ಹುರಿದ ಕಡಲೆಯನ್ನು ತಿಂದ ಒಂದೇ ಕುಟುಂಬದ ಮೂವರು ಸಾವನ್ನಪ್ಪಿ ಇಬ್ಬರು ಗಂಭೀರ ಸ್ಥಿತಿಯಲ್ಲಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಬುಲಂದ್‌ ಶಹರ್‌ ನಲ್ಲಿ ನಡೆದಿದೆ.

ಬುಲಂದ್‌ಶಹರ್‌ನ ಥಾನಾ ನರ್ಸೇನಾ ಪ್ರದೇಶದ ಮೊಹಮ್ಮದ್‌ಪುರ ಬರ್ವಾಲಾ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸಂತ್ರಸ್ತ ಕುಟುಂಬವು ನವೆಂಬರ್ 24 ರ ಸಂಜೆ ಮನೆಯಲ್ಲಿ ಭೋಜನವನ್ನು ಸಿದ್ಧಪಡಿಸಿದ್ದು, ಮಾರುಕಟ್ಟೆಯಲ್ಲಿ ಹುರಿದ ಕಡಲೆಯನ್ನು ಖರೀದಿಸಿತ್ತು. ಇದನ್ನು ಸೇವಿಸಿದ ಬಳಿಕ ಎಂಟು ವರ್ಷದ ಲವಿಶ್, ಐವತ್ತು ವರ್ಷದ ಕಲುವಾ ಸಿಂಗ್ ಹಾಗೂ ಜೋಗೇಂದ್ರ ಸಾವಿಗೀಡಾಗಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಅಧಿಕಾರಿಗಳು ಸಾವಿನ ಕಾರಣ ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದು, ಸ್ಥಳಕ್ಕೆ ಆಗಮಿಸಿದ ಹಿರಿಯ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸದೆ ಮೃತರ ಕುಟುಂಬದವರು ಇಬ್ಬರ ಶವಗಳನ್ನು ಈಗಾಗಲೇ ಸುಟ್ಟು ಹಾಕಿದ್ದರು. ಹೀಗಾಗಿ ಮರುದಿನ ಮೃತಪಟ್ಟ ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವರದಿ ಬಂದ ಬಳಿಕ ಸಾವಿಗೆ ಕಾರಣ ಏನು ಎಂಬುದು ಗೊತ್ತಾಗಲಿದೆ.

ಇದರ ಜೊತೆಗೆ ಕಡಲೆ ಮತ್ತು ಇತರ ಆಹಾರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ ಎಂದು ಆಹಾರ ಅಧಿಕಾರಿ ವಿನೀತ್ ಕುಮಾರ್ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read