ಮ್ಯಾಟ್ರಿಮೋನಿಯಲ್ಲಿ ವರನ ಅನ್ವೇಷಣೆ ಮಾಡುವ ಮುನ್ನಾ ಹುಷಾರು! ಬರೋಬ್ಬರಿ 15 ಮದುವೆಯಾದ ಖತರ್ನಾಕ್ ಕಿಲಾಡಿ!

ಮೈಸೂರು : ಮ್ಯಾಟ್ರಿಮೋನಿಯಲ್ಲಿ ವರನ ಅನ್ವೇಷಣೆ ಮಾಡುವ ಯುವತಿಯರು, ವಿಧವಾ ಮಹಿಳೆಯರು ಹುಷಾರಾಗಿರಿ, ಯಾಕೆಂದ್ರೆ ವ್ಯಕ್ತಿಯೊಬ್ಬ ಬರೋಬ್ಬರಿ 15 ಮದುವೆಯಾಗಿ ಚಿನ್ನಭಾರಣ ದೋಚಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಹೌದು, ಮ್ಯಾಟ್ರಿಮೋನಿಯಲ್ಲಿ ವಿಧೆಯರು, ಅವಿವಾಹಿತರಿಗೆ ಗಾಳ ಹಾಕಿ ಬರೋಬ್ಬರಿ 15 ಮಹಿಳೆಯರ ಜೊತೆಗೆ ಮದುವೆಯಾಗಿ ಹಣ, ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದ ಖತರ್ನಾಕ್ ಕಿಲಾಡಿಯನ್ನು ಮೈಸೂರಿನ ಕುವೆಂಪು ನಗರದ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಬನಶಂಕರಿ ನಿವಾಸಿ ಮಹೇಶ್ ಎಂಬಾತ ಮ್ಯಾಟ್ರಿ ಮೋನಿಯಲ್ಲಿ ಮದುವೆಯಾಗಿ ಬಳಿಕ ಮಹಿಳೆಯರಿಂದ ಹಣ, ಚಿನ್ನಾಭರಣ ಕದ್ದು ಪರಾರಿಯಾಗುತ್ತಿದ್ದ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, 2 ಲಕ್ಷ ರೂ.ನಗದು, 2 ಕಾರ್, 7 ಮೊಬೈಲ್ ಗಳನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿ ಮಹೇಶ್ ಮೈಸೂರಿನ ನಿವಾಸಿ ಹೇಮಲತಾ ಎಂಬುವರಿಗೆ ತಾನು ಡಾಕ್ಟರ್ ಎಂದು ಹೇಳಿಕೊಂಡು ಮೋಸ ಮಾಡಿ ಮದುವೆ ಮಾಡಿಕೊಂಡಿದ್ದ. ಬಳಿಕ ಆರೋಪಿಯ ನಿಜಬಣ್ಣ ಬಯಲಾಗಿದ್ದು, ಹೇಮಲತಾ ಪೊಲೀಸರಿಗೆ ದೂರು ನೀಡಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read