ಮುಖದ ಕಲೆಗಳ ನಿವಾರಣೆಗೆ ಬೆಸ್ಟ್ ‘ಮುಲ್ತಾನಿ ಮಿಟ್ಟಿ’

ಕಲುಷಿತ ವಾತಾವರಣ, ಆರೋಗ್ಯದ ಜೊತೆಗೆ ತ್ವಚೆಯ ಸೌಂದರ್ಯವನ್ನು ಕೂಡ ಹಾಳು ಮಾಡುತ್ತದೆ. ಧೂಳು, ಹೊಗೆಯಿಂದ ಮುಖದ ಸೌಂದರ್ಯ ಕಳೆಗುಂದುತ್ತದೆ. ಇದರಿಂದ ಪಾರಾಗಲು ಉಪಯೋಗವಾಗುವಂತ ಕೆಲವು ಸೌಂದರ್ಯ ಸಂಬಂಧಿ ಸಲಹೆಗಳು ಇಲ್ಲಿವೆ.

ಮುಲ್ತಾನಿ ಮಿಟ್ಟಿಗೆ ಬಾದಾಮಿ ಪುಡಿಯನ್ನು ಹಾಕಿ ಅದಕ್ಕೆ ಸ್ವಲ್ಪ ಪ್ರಮಾಣದಲ್ಲಿ ಹಾಲನ್ನು ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳಿ. ಹೀಗೆ ಮಾಡುವುದರಿಂದ ಮುಖ ಸ್ವಚ್ಛವಾಗುತ್ತದೆ ಮತ್ತು ಮೃದುವಾಗುತ್ತದೆ.

ಪುದೀನಾದ ಎಲೆಗಳನ್ನು ನುಣ್ಣಗೆ ಪುಡಿ ಮಾಡಿ ಅದಕ್ಕೆ ಸ್ವಲ್ಪ ಪ್ರಮಾಣದಲ್ಲಿ ಮೊಸರನ್ನು ಸೇರಿಸಿ. ಇವೆರಡರ ಮಿಶ್ರಣವನ್ನು ಮುಲ್ತಾನಿ ಮಿಟ್ಟಿಗೆ ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳಿ. ಹೀಗೆ ಮಾಡುವುದರಿಂದ ಮುಖದ ಕಲೆಗಳು ಮಾಯವಾಗುತ್ತವೆ.

ಮುಲ್ತಾನಿ ಮಿಟ್ಟಿಗೆ ರೋಸ್ ವಾಟರ್ ಸೇರಿಸಿ ಮುಖಕ್ಕೆ ಹಚ್ಚಿ. ಅದು ಪೂರ್ತಿಯಾಗಿ ಒಣಗಿದ ನಂತರ ಮುಖವನ್ನು ತೊಳೆದುಕೊಳ್ಳಿ. ಹೀಗೆ ಮಾಡುವುದರಿಂದ ಮುಖದಲ್ಲಿನ ಜಿಡ್ಡಿನ ಅಂಶ ಮಾಯವಾಗಿ ಚರ್ಮ ಕಾಂತಿಯುತವಾಗಿರುತ್ತದೆ.

ಒಂದು ಚಮಚ ಪಪ್ಪಾಯಿ ಹಣ್ಣಿನ ತಿರುಳಿನ ಜೊತೆ ಸ್ವಲ್ಪ ಜೇನುತುಪ್ಪ ಸೇರಿಸಿ, ಅದನ್ನು ಮುಲ್ತಾನಿ ಮಿಟ್ಟಿಗೆ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ.

ಚಂದನದ ಪೌಡರ್ ಜೊತೆ ಟೊಮೆಟೋ ರಸವನ್ನು ಬೆರೆಸಿ ಅದನ್ನು ಮುಲ್ತಾನಿ ಮಿಟ್ಟಿಗೆ ಸೇರಿಸಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮುಖದ ಹೊಳಪು ಹೆಚ್ಚುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read