ಎಲೆಕ್ಟ್ರಿಕ್ ವಾಹನ ಬಳಕೆದಾರರಿಗೆ ಗುಡ್ ನ್ಯೂಸ್: ‘ಇವಿ ಮಿತ್ರ’ ಹೊಸ ಆ್ಯಪ್ ನಲ್ಲಿ ಹಲವು ಸೇವೆ ಲಭ್ಯ

ಎಲೆಕ್ಟ್ರಿಕ್‌ ವಾಹನ(ಇವಿ) ಬಳಕೆದಾರರಿಗೆ ಚಾರ್ಜಿಂಗ್‌ ಕೇಂದ್ರಗಳ ಮಾಹಿತಿ, ಹಣ ಪಾವತಿ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸುತ್ತಿರುವ ಬೆಸ್ಕಾಂನ ʼಇವಿ ಮಿತ್ರʼ ಆ್ಯಪ್‌ ಈಗ ಹೊಸ ರೂಪದಲ್ಲಿ ಗ್ರಾಹಕರಿಗೆ ಲಭ್ಯವಾಗುತ್ತಿದೆ.

ಆಂಡ್ರಾಯ್ಡ್‌ ಮತ್ತು ಐಒಎಸ್‌ ಎರಡು ಅಪ್ಲಿಕೇಶನ್‌ಗಳಲ್ಲಿ ಲಭ್ಯವಿರುವ ಹೊಸ ʼಇವಿ ಮಿತ್ರʼ ಆ್ಯಪ್‌, ಬಳಕೆದಾರರ ಪ್ರೊಫೈಲ್‌ ನಿರ್ವಹಣೆ, ಚಾರ್ಜಿಂಗ್‌ ಸ್ಟೇಷನ್‌ಗಳ ವೀಕ್ಷಣೆಯೊಂದಿಗೆ ಮಾಹಿತಿ, ಚಾರ್ಜಿಂಗ್‌ ಪ್ರಕ್ರಿಯೆ, ಬುಕ್ಕಿಂಗ್‌ ವಿವರ, ಚಾರ್ಜಿಂಗ್‌ ಸ್ಟೇಷನ್‌ಗಳಲ್ಲಿರುವ ಸೌಕರ್ಯಗಳು ಮತ್ತು ಚಾರ್ಜಿಂಗ್‌ ಕಾಯ್ದಿರಿಸುವ ಸೌಲಭ್ಯ ಹೊಂದಿದೆ.

ಗ್ರಾಹಕರು ಹಳೆಯ ʼಇವಿ ಮಿತ್ರʼ ಆ್ಯಪ್‌ ಡಿಲೀಟ್‌ ಮಾಡಿ https://play.google.com/store/apps/details?id=com.bescom.evmithra ಲಿಂಕ್‌ ಮೂಲಕ ಹೊಸ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ವ್ಯಾಲೆಟ್‌ನಲ್ಲಿ ಹಣ ಉಳಿದಿದ್ದರೂ ಚಿಂತಿಸಬೇಕಿಲ್ಲ. ಹೊಸ ಆ್ಯಪ್‌ಗೆ ಆ ಹಣ ವರ್ಗಾವಣೆಯಾಗುತ್ತದೆ.

ಕನ್ನಡ, ಇಂಗ್ಲಿಷ್‌, ಹಿಂದಿ ಹಾಗೂ ಪ್ರಾದೇಶಿಕ ಭಾಷೆಗಳು ಸೇರಿದಂತೆ 11 ಭಾಷೆಗಳಲ್ಲಿ ಇವಿ ಚಾರ್ಜಿಂಗ್‌ ಮಾಹಿತಿ ಲಭ್ಯವಿದ್ದು, ಹಣ ಪಾವತಿಗೆ ಹಲವು ಆಯ್ಕೆಗಳೂ ಇವೆ. ರಿಟೇಲ್‌ ಬಳಕೆದಾರರ ಶುಲ್ಕದ ವಿವರ, ಬಿಲ್ಲಿಂಗ್‌, ಪ್ರೊಫೈಲ್‌ ಇರುತ್ತದೆ.

ಬಳಕೆ ಹೇಗೆ?

ಆ್ಯಪ್‌ ಡೌನ್ಲೋಡ್‌ ಮಾಡಿದ ನಂತರ ನಿಮ್ಮ ಫೋನ್‌ ನಂಬರ್‌ ನಮೂದಿಸಿ, ಲಾಗಿನ್‌ ಆಗಿ.

ನಿಮ್ಮ ಮೊಬೈಲ್‌ಗೆ ಬರುವ ಒಟಿಪಿ ಸಂಖ್ಯೆ ದಾಖಲಿಸಿದ ನಂತರ, ಲಾಗಿನ್‌ ಖಚಿತವಾಗುತ್ತದೆ.

ಖಾಸಗಿ ಹಾಗೂ ವಾಣಿಜ್ಯ ಬಳಕೆದಾರರು ಈ ಒಂದೇ ಆ್ಯಪ್‌ ಮೂಲಕ ಚಾರ್ಜಿಂಗ್‌ ಸೌಲಭ್ಯ ಪಡೆಯಬಹುದು.

ಮ್ಯಾಪ್‌ ಮೂಲಕ ಚಾರ್ಜಿಂಗ್‌ ಕೇಂದ್ರಗಳ ಮಾಹಿತಿ ತಿಳಿದುಕೊಳ್ಳಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read