Bengaluru : ‘Rapido’ ಆಟೋದಲ್ಲೇ ಮಹಿಳೆಗೆ ಲೈಂಗಿಕ ದೌರ್ಜನ್ಯ, ಹೊರಗೆ ದಬ್ಬಿದ ಚಾಲಕ

ಬೆಂಗಳೂರು : ಬೆಂಗಳೂರಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ರ್ಯಾಪಿಡೊ ಆಟೋದಲ್ಲೇ ಮಹಿಳೆಗೆ ಲೈಂಗಿಕ ದೌರ್ಜನ್ಯ ನಡೆದ ಘಟನೆ ಬೆಂಗಳೂರಲ್ಲಿ ನಡೆದಿದೆ. ನಂತರ ಚಾಲಕ ಮಹಿಳೆಯನ್ನು ಹೊರಗೆ ತಳ್ಳಿದ್ದಾನೆ.

ಸಾರ್ವಜನಿಕ ಜಾಗದಲ್ಲೇ ಮಹಿಳೆಯರ ಮೇಲಿನ ದೌರ್ಜನ್ಯಗಳು ನಡೆಯುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ರ್ಯಾಪಿಡೋ ಆಟೋ ಹತ್ತಿದ ಮಹಿಳೆಗೆ ಚಾಲಕ ಲೈಂಗಿಕ ಕಿರುಕುಳ ನೀಡಿದ್ದು, ನಂತರ ಆಟೋ ರಿಕ್ಷಾದಿಂದ ಹೊರಗೆ ತಳ್ಳಿದ್ದಾನೆ. ಘಟನೆ ನಡೆದ ಮರುದಿನ ಮಹಿಳೆಯರ ಸ್ನೇಹಿತರೊಬ್ಬರು ಟ್ವಿಟ್ ನಲ್ಲಿ ಹಂಚಿಕೊಂಡಿದ್ದಾರೆ.
ರ್ಯಾಪಿಡೊ ಲೈಂಗಿಕ ಪರಭಕ್ಷಕಗಳನ್ನು ಸಕ್ರಿಯಗೊಳಿಸುತ್ತದೆ. ಯಾರೂ ಯಾರ್ಪಿಡೋ ಬಳಸಬೇಡಿ.

ನನ್ನ ಸ್ನೇಹಿತರೊಬ್ಬರು ಕಳೆದ ರಾತ್ರಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದರು . ಆಟೋ ಚಾಲಕ. ಅವಳನ್ನು ಅನುಚಿತವಾಗಿ ಸ್ಪರ್ಶಿಸಿದ್ದಾನೆ, ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಆಟೋದಿಂದ ಹೊರಕ್ಕೆ ತಳ್ಳಿದ್ದಾನೆ . ನಂತರ ಸ್ನೇಹಿತೆ ರ್ಯಾಪಿಡೊವನ್ನು ಸಂಪರ್ಕಿಸಿ ದೂರು ಕೊಡಲು ಹೋದಾಗ ಅವರು ‘ಕ್ಷಮಿಸಿ, ನಾವು ಆಟೋ ಡ್ರೈವರ್ ವಿವರಗಳನ್ನು ಸಂಗ್ರಹಿಸುವುದಿಲ್ಲ, ನಮ್ಮ ಸಮಸ್ಯೆಯಲ್ಲ ಎಂದು ಹೇಳಿದರು.ಸುರಕ್ಷಿತವಾಗಿರಿ. ಯಾರೂ ರ್ಯಾಪಿಡೊ ಬಳಸದಂತೆ ನಿಮ್ಮ ಮಹಿಳಾ ಸ್ನೇಹಿತರು ಮತ್ತು ಕುಟುಂಬಕ್ಕೆ ತಿಳಿಸಿ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read