ಬಿಟ್ಟುಹೋಗುತ್ತಿರುವ ಫ್ಲಾಟ್ ಗೆ ಹೊಸಬರನ್ನು ತರಲು ಡೇಟಿಂಗ್ ಅಪ್ಲಿಕೇಷನ್ ಬಳಕೆ; ಬೆಂಗಳೂರು ಯುವತಿಯ ವಿಭಿನ್ನ ʼಐಡಿಯಾʼ

bengaluru house

ಬೆಂಗಳೂರಲ್ಲಿ ಬಾಡಿಗೆ ಮನೆ, ಫ್ಲಾಟ್ ಹುಡುಕುವುದು ಕಷ್ಟಸಾಧ್ಯ. ದಿನಸಿ ಅಂಗಡಿ, ಮೆಡಿಕಲ್ ಶಾಪ್ ಸೇರಿದಂತೆ ಅಗತ್ಯ ವಸ್ತುಗಳು ತುರ್ತಾಗಿ ಸಿಗುವಂತಹ ಜಾಗದಲ್ಲಿ ಮನೆ ಹುಡುಕುವುದಂತೂ ತುಂಬಾ ಕಷ್ಟದಾಯಕ. ಇಂತಹ ಮಹಾನಗರಿಯಲ್ಲಿ ಯುವತಿಯೊಬ್ಬಳು ತಾನು ಬಿಟ್ಟೋಗುವ ಫ್ಲಾಟ್ ಗೆ ಹೊಸ ಬಾಡಿಗೆದಾರರನ್ನು ಕರೆತರಲು ಮಾಡಿರುವ ಐಡಿಯಾ ಸಖತ್ತಾಗಿದೆ. ಅದೇನೆಂದರೆ ಸಾಮಾನ್ಯವಾಗಿ ಡೇಟಿಂಗ್ ಅಪ್ಲಿಕೇಷನ್ ನಲ್ಲಿ ಪ್ರೀತಿ, ಗೆಳೆತನಕ್ಕಾಗಿ ಪ್ರಪೋಸಲ್ ಬರುತ್ತದೆ. ಆದರೆ 22 ವರ್ಷ ವಯಸ್ಸಿನ ಕರುಣಾ ಟಾಟಾ ಎಂಬ ಯುವತಿ ತಾನು ಬಿಟ್ಟುಹೋಗುತ್ತಿರುವ ಫ್ಲಾಟ್ ಗೆ ಮತ್ತೊಬ್ಬ ಬಾಡಿಗೆದಾರರನ್ನು ಕರೆತರಲು ಡೇಟಿಂಗ್ ಅಪ್ಲಿಕೇಷನ್ ಬಳಸಿದ್ದಾರೆ.

ಕರುಣಾ, ತನ್ನ ಟಿಂಡರ್ ಮತ್ತು ಹಿಂಜ್‌ ಪ್ರೊಫೈಲ್ ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಹಾಸ್ಯಮಯವಾಗಿ ತನ್ನ ಮನೆಗೆ ‘ಅಮರ್ ಅಕ್ಬರ್ ಆಂಟೋನಿ’ ಚಲನಚಿತ್ರದ ಕ್ಲಾಸಿಕ್ ಬಾಲಿವುಡ್ ಟ್ಯೂನ್‌ “ಖೋಲಿ ಸಂಖ್ಯೆ 420” ಎಂದು ಹೆಸರಿಟ್ಟಿದ್ದಾರೆ. ಸಿಂಗಸಂದ್ರದಲ್ಲಿರುವ ಮೂರು ಬೆಡ್‌ರೂಮ್ ಅಪಾರ್ಟ್‌ಮೆಂಟ್‌ ನ “ಖೋಲಿ ಸಂಖ್ಯೆ 420” ಗೆ ಯಾರಾದರೂ ಬರುತ್ತೀರಾ ? ಫಾರ್ಮಸಿ ಮತ್ತು ಸೂಪರ್‌ ಮಾರ್ಕೆಟ್‌ಗಳಂತಹ ಅಗತ್ಯ ಸೌಕರ್ಯಗಳಿಗೆ ಅನುಕೂಲಕರವಾಗಿ ಈ ಫ್ಲಾಟ್ ಹತ್ತಿರದಲ್ಲಿದೆ.

ಡೇಟಿಂಗ್ ಅಪ್ಲಿಕೇಶನ್‌ಗಳಲ್ಲಿ ಕರುಣಾ ಅವರು ತಮ್ಮ ಮನೆಯನ್ನು “ಸೌಂದರ್ಯದ ರಾಣಿ” ಎಂದು ವಿವರಿಸುತ್ತಾ ಇದು ಉತ್ತಮವಾಗಿ ನಿರ್ವಹಿಸಲ್ಪಟ್ಟ ಸ್ಥಳ ಎಂಬಂತೆ ಹೇಳಿದ್ದಾರೆ. ಜೊತೆಗೆ ಇದನ್ನು ಸಾಧ್ಯಮಾಡಿಕೊಡಿ ಎಂದು ಟಿಂಡರ್ ಗೆ ಮನವಿ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಈ ಪೋಸ್ಟ್ ವೈರಲ್ ಆಗಿದ್ದು 3 ಸಾವಿರ ವೀಕ್ಷಣೆಗಳನ್ನು ಗಳಿಸಿದೆ. ಫ್ಲಾಟ್ ಮೇಟ್ ಅನ್ನು ಹುಡುಕುವ ಸಾಂಪ್ರದಾಯಿಕ ವಿಧಾನಗಳ ಬಗ್ಗೆ ಹತಾಶೆ ವ್ಯಕ್ತಪಡಿಸಿದ ಕರುಣಾ, ಈ ಬಾರಿ ಈ ರೀತಿಯ ವಿಭಿನ್ನ ಪ್ರಯತ್ನಕ್ಕೆ ಮುಂದಾಗಿರುವುದಾಗಿ ತಿಳಿಸಿದ್ದಾರೆ .

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read