ಬೇರೊಬ್ಬಳಿಗೆ ‘ತಾಳಿ’ ಕಟ್ಟುವಾಗ ಸಿನಿಮಾ ಶೈಲಿಯಲ್ಲಿ ಮಾಜಿ ಪ್ರೇಯಸಿ ಎಂಟ್ರಿ…ಮುಂದಾಗಿದ್ದೇನು..?

ಮಂಗಳೂರು : ಕಲ್ಯಾಣ ಮಂಟಪದಲ್ಲಿ ಯುವತಿಯೋರ್ವಳಿಗೆ ಯುವಕ ತಾಳಿ ಕಟ್ಟಲು ಮುಂದಾಗುತ್ತಿರುವ ವೇಳೆ ಥೇಟ್ ಸಿನಿಮಾ ಶೈಲಿಯಲ್ಲಿ ಮಾಜಿ ಪ್ರೇಯಸಿಯೊಬ್ಬಳು ಎಂಟ್ರಿಯಾಗಿದ್ದು, ಕಲ್ಯಾಣ ಮಂಟಪದಲ್ಲಿ ದೊಡ್ಡ ಹೈಡ್ರಾಮವೇ ನಡೆದಿದೆ.

ಕೇರಳ ಮೂಲದ ಅಕ್ಷಯ್ ಎಂಬಾತ ಮಂಗಳೂರು ಮೂಲದ ಯುವತಿ ಜೊತೆ ಮದುವೆ ಆಗುತ್ತಿದ್ದನು. ಈ ವೇಳೆ ಅಲ್ಲಿಗೆ ಎಂಟ್ರಿಕೊಟ್ಟ ಮಾಜಿ ಪ್ರೇಯಸಿ ದೊಡ್ಡ ಹೈಡ್ರಾಮಾ ನಡೆಸಿದ್ದಾಳೆ.

ಯುವತಿ ಹೇಳಿದ್ದೇನು..?

ಅಕ್ಷಯ್ ನನ್ನನ್ನು ಶಾದಿ ಡಾಟ್ ಕಾಮ್ ಮೂಲಕ ಪರಿಚಯ ಮಾಡಿಕೊಂಡು ನನ್ನ ಜೊತೆ ಸ್ನೇಹ ಬೆಳೆಸಿದ್ದಾನೆ. ನಂತರ ಮದುವೆಯಾಗುವುದಾಗಿ ನಂಬಿಸಿ ನನ್ನ ಜೊತೆ ದೈಹಿಕ ಸಂಪರ್ಕ ಬೆಳೆಸಿ ಕೈ ಕೊಟ್ಟಿದ್ದಾನೆ. ಅಲ್ಲದೇ ಆತ ಡ್ರಗ್ ಅಡಿಕ್ಟ್ ಆಗಿದ್ದನು ಎಂದು ಯುವತಿ ಆರೋಪಿಸಿದ್ದಾಳೆ. ನಂತರ ಮದುವೆ ಹಾಲ್ ಗೆ ಬಂದ ಪೊಲೀಸರು ಯುವತಿಯನ್ನು ಕರೆದೊಯ್ದಿದ್ದಾರೆ, ಅಕ್ಷಯ್ ತಾಳಿ ಕಟ್ಟಿದ್ದಾನೆ. ಈ ಹಿನ್ನೆಲೆ ಪೊಲೀಸರ ವಿರುದ್ಧ ಯುವತಿ ಆಕ್ರೋಶ ಹೊರ ಹಾಕಿದ್ದಾಳೆ.

ಘಟನೆ ಸಂಬಂಧ ಡಿಸೆಂಬರ್ 26 ರಂದು ಅಕ್ಷಯ್ ವಿರುದ್ಧ ಕೇರಳದ ಪೊಲೀಸ್ ಠಾಣೆಯಲ್ಲಿ ಯುವತಿ ಅತ್ಯಾಚಾರದ ದೂರು ದಾಖಲಿಸಿದ್ದಾಳೆ. ಪ್ರಕರಣ ಸಂಬಂಧ ಅರೋಪಿ ಅಕ್ಷಯ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿತ್ತು. ಇದರ ನಡುವೆ ಮದುವೆ ಫಿಕ್ಸ್ ಆಗಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read