ಶೇ.50 ರಿಯಾಯಿತಿ ಬೆನ್ನಲ್ಲೇ 22 ಕೋಟಿ ರೂಪಾಯಿಗೂ ಅಧಿಕ ದಂಡ ಪಾವತಿ

ಬಾಕಿ ಉಳಿದಿರುವ ದಂಡದ ಬಾಕಿಯನ್ನು ತೆರವುಗೊಳಿಸಲು ಬೆಂಗಳೂರು ಸಂಚಾರಿ ಪೊಲೀಸರ್ ಇಲಾಖೆ ಆಫರ್ ಮಾಡ್ತಿದ್ದಂತೆ ವಾಹನ ಸವಾರರು ಭಾರೀ ಪ್ರಮಾಣದಲ್ಲಿ ದಂಡ ತೆತ್ತಿದ್ದಾರೆ.

ಅಸ್ತಿತ್ವದಲ್ಲಿರುವ ಇ-ಚಲನ್‌ಗಳ ಮೇಲೆ 50% ರಿಯಾಯಿತಿ ಸಿಕ್ತಿದ್ದಂತೆ ವಾಹನ ಸವಾರರು ಒಟ್ಟು ರೂ. 22.3 ಕೋಟಿ ದಂಡವನ್ನು ಸಲ್ಲಿಸಿದ್ದಾರೆ.

ಕೆಲವು ಸಮಯದಿಂದ ಬಾಕಿ ಉಳಿದಿದ್ದ 7,41,048 ಪ್ರಕರಣಗಳನ್ನು ತೆರವುಗೊಳಿಸಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ. ರಿಯಾಯಿತಿ ಪಡೆದವರಿಂದ 22,32,47,491 ರೂ. ದಂಡದ ಮೊತ್ತವನ್ನ ಸಂಗ್ರಹಿಸಲಾಗಿದೆ. ಭಾನುವಾರ ಒಂದೇ ದಿನ 8.5 ಕೋಟಿ ಸಂಗ್ರಹವಾಗಿದ್ದು,. ಶುಕ್ರವಾರದಂದು 8 ಕೋಟಿ ಸಂಗ್ರಹಿಸಲಾಗಿತ್ತು.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಾಧ್ಯಕ್ಷ ನ್ಯಾಯಮೂರ್ತಿ ಬಿ. ವೀರಪ್ಪ ಅವರ ಅಧ್ಯಕ್ಷತೆಯಲ್ಲಿ ಜನವರಿ 27 ರಂದು ನಡೆದ ವಿಚಾರಣೆಯ ನಂತರ ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ಶೇಕಡಾ 50 ರಷ್ಟು ರಿಯಾಯಿತಿ ನೀಡಲು ನಿರ್ಧರಿಸಲಾಯಿತು.

ಸಂಚಾರ ಇಲಾಖೆ ಮಾಹಿತಿಯ ಪ್ರಕಾರ 500 ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ 2 ಮಿಲಿಯನ್ ಇ-ಚಲನ್ ಪ್ರಕರಣಗಳು ಬಾಕಿಯಿವೆ. ಇದು ಒಟ್ಟು ಬಾಕಿಯಿರುವ ದಂಡದ ಮೊತ್ತದ 80% ಕ್ಕಿಂತ ಹೆಚ್ಚು. ಶೇಕಡಾ 50 ರಷ್ಟು ರಿಯಾಯಿತಿಯು ಫೆಬ್ರವರಿ 11 ರವರೆಗೆ ಮಾತ್ರ ಮಾನ್ಯವಾಗಿರುತ್ತದೆ.

ಈ ಯೋಜನೆಯಡಿ ತಮ್ಮ ದಂಡವನ್ನು ಪಾವತಿಸಲು ಬಯಸುವ ಜನರು ಸ್ಥಳೀಯ ಸಂಚಾರ ಪೊಲೀಸ್ ಠಾಣೆಗೆ ಹೋಗಬಹುದು ಅಥವಾ PayTM ಅಥವಾ ಕರ್ನಾಟಕ ಒನ್ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಪಾವತಿಸಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read